ಮಧುರ ಕ್ಷಣಗಳ ಆಸ್ವಾದಿಸುತ್ತಾ...

7

ಮಧುರ ಕ್ಷಣಗಳ ಆಸ್ವಾದಿಸುತ್ತಾ...

Published:
Updated:

ಕಾಲೇಜು ಕ್ಯಾಂಪಸ್ ಎಂದರೆ ಹಾಗೆಯೇ. ಎಲ್ಲಿ ನೋಡಿದರೂ ವಿದ್ಯಾರ್ಥಿಗಳ ಕಲರವ. ತರಗತಿಯ ಒಳಗೂ ಅಷ್ಟೆ, ಹೊರಗೂ ಅಷ್ಟೆ.

ಅಂತೆಯೇ ಬೆಂಗಳೂರಿನ ರಿಚ್ಮಂಡ್ ರಸ್ತೆಯ ಬಾಲ್ಡ್‌ವಿನ್ ವಿಮೆನ್ಸ್ ಮೆಥೊಡಿಸ್ಟ್ ಕಾಲೇಜು ಪ್ರವೇಶಿಸಿದರೆ ಸಾಕು, ಅಲ್ಲಿನ ಕ್ಯಾಂಟೀನು, ಪಾರ್ಕಿಂಗ್ ಸ್ಥಳ ಮತ್ತು ಕಾಲೇಜಿನ ಮುಂಭಾಗದಲ್ಲಿನ ಪ್ರಾಂಗಣದಲ್ಲಿ  ವಿದ್ಯಾರ್ಥಿನಿಯರು ಗುಂಪುಗೂಡಿ ನಿಂತಿರುವುದು ಕಂಡುಬರುತ್ತದೆ.ಯಾವುದೇ ಕಾಲೇಜಿರಲಿ, ಇಂಥ ಚಿತ್ರಗಳು ಸಾಮಾನ್ಯ. ಸೀರಿಯಸ್ ಆಗಿ ಸಾಗುವ ಪಾಠಗಳ ನಡುವೆ   ಒಂದರೆಕ್ಷಣ ಮನಸ್ಸಿಗೆ ರಿಲ್ಯಾಕ್ಸ್ ನೀಡುವ ಸಲುವಾಗಿ ವಿದ್ಯಾರ್ಥಿಗಳು ಇಂಥ ಸ್ಥಳ ಅಥವಾ ಹ್ಯಾಂಗ್‌ಔಟ್‌ಗಳನ್ನು ಆಶ್ರಯಿಸುವುದು ಸರ್ವೇಸಾಮಾನ್ಯ.ಹಾಗೆ ನೋಡಿದರೆ, ಬಾಲ್ಡ್‌ವಿನ್ ಕಾಲೇಜಿನ ವಿದ್ಯಾರ್ಥಿನಿಯರು ಈ ನಿಟ್ಟಿನಲ್ಲಿ ಭಾರೀ ಜಾಣರೆಂದೇ ಹೇಳಬಹುದು. ಏಕೆಂದರೆ ಯಾವುದೇ ತರಗತಿ ಕೊಠಡಿ ಖಾಲಿಯಾಗಿದ್ದರೆ ಸಾಕು, ಅದನ್ನವರು ತಮ್ಮದೇ ‘ಅಡ್ಡಾ’ ವನ್ನಾಗಿ ಪರಿವರ್ತಿಸುವುದರಲ್ಲಿ ನಿಸ್ಸೀಮರೇ ಸರಿ.  ತಲೆಕೂದಲು ಬಾಚಲು, ಲಂಚ್ ಬಾಕ್ಸ್‌ಗಳಲ್ಲಿ ತಂದದ್ದನ್ನು ಹಂಚಿ ತಿನ್ನಲು, ಉಳಿದ ವಿದ್ಯಾರ್ಥಿನಿಯರ ಬಗ್ಗೆ ಗಾಸಿಪ್ ಮಾಡಲು ಜೊತೆಗೆ ತಮ್ಮದೇ ಇನ್ನಿತರ ಕೆಲಸಗಳನ್ನು ಮಾಡಲು ಅವರಿಗೆ ಈ ಖಾಲಿ ಕೊಠಡಿ ಸಾಕು.ಅದೇನೇ ಇದ್ದರೂ, ಅವರ ಮೆಚ್ಚಿನ ‘ಹಾಟ್‌ಸ್ಪಾಟ್’ ಎಂದರೆ ಕಾಲೇಜು ಕ್ಯಾಂಟೀನು. ರುಚಿಯಾದ ಆಹಾರದ ಜೊತೆಗೆ ತಮಗೆ ಖುಷಿ ಕೊಡುವ ಎಲ್ಲಾ ರೀತಿಯ ಮೋಜು ಮಸ್ತಿಗಳಿಗೆ ಸೂಕ್ತ ತಾಣ ಅದು.  ಕಾಲೇಜು ಕ್ಯಾಂಟೀನು ಸದಾ ಗಿಜಿಗುಡುತ್ತಿರುತ್ತದೆ. ಕ್ಯಾಂಟೀನಿನ ಮಾಲಕನಂತೂ ಈ ಕ್ರೇಜಿ ವಿದ್ಯಾರ್ಥಿನಿಯರಿಗೆ ಒಂದೋ ‘ಅಂಕಲ್’ ಅಥವಾ ‘ಭೈಯ್ಯಾ’ ಆಗಿ ಬಿಡುತ್ತಾನೆ.

 

‘ನಮ್ಮ ಕ್ಯಾಂಟೀನ್‌ಗೆ ಅದರದ್ದೇ ಆದ ಚಾರ್ಮ್ ಇದೆ. ವಿವಿಧ ರೀತಿಯ ರುಚಿಯಾದ ಆಹಾರ  -ಬಿರಿಯಾನಿ, ಕಬಾಬ್, ಗೋಬಿ ಮಂಚೂರಿಯನ್, ಮ್ಯಾಗಿ, ಐಸ್‌ಕ್ರೀಂ, ಲೆಮನ್ ಸೋಡಾ ಮತ್ತು ಬೇಕರಿ ತಿಂಡಿಗಳು ಇಲ್ಲಿ ದೊರೆಯುತ್ತವೆ. ರುಚಿಕರವಾದ ಆಹಾರ ದೊರೆಯುವುದೊಂದೇ ಅಲ್ಲ,  ಧಾರಾವಾಹಿಯಿಂದ ಹಿಡಿದು ಕ್ರಿಕೆಟ್ ಸ್ಟಾರ್ ಬಗ್ಗೆ ಹೀಗೆ ಯಾವುದೇ ವಿಷಯದ ಕುರಿತು ಚರ್ಚಿಸಲು ಇದು ಸೂಕ್ತ ಸ್ಥಳ ಎನ್ನುತ್ತಾರೆ ವಿದ್ಯಾರ್ಥಿನಿಯಲ್ಲೊಬ್ಬರಾದ ರೋಹಿಣಿ. ಆದರೆ ಇವರ್ಯಾರೂ ಲೈಬ್ರೆರಿ ಹೋಗುವುದಿಲ್ಲವೆಂದಲ್ಲ. ಅಸೈನ್‌ಮೆಂಟ್‌ಗಳು ಮತ್ತು ನೋಟ್ಸ್‌ಗಳನ್ನು ಬರೆಯಲು ಲೈಬ್ರೆರಿಯೇ ಬೇಕು. ‘ನಾವು ತುಂಬಾ ಉತ್ಸಾಹಿಗಳು. ಹಾಗಾಗಿ ಈ ಕಾಲೇಜು ದಿನಗಳಲ್ಲಿ ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಸ್ನೇಹಿತರನ್ನು ಸಂಪಾದಿಸಿ ಅವರೊಡನೆ ಕಾಲ ಕಳೆಯಲು ಇಷ್ಟಪಡುತ್ತೇವೆ’  ಇಂಥ ಕಾಲೇಜು ‘ಅಡ್ಡಾ’ಗಳು ನಮ್ಮ ಬದುಕಿನ ಮಧುರ ಕ್ಷಣಗಳನ್ನು ಸೃಷ್ಟಿಸುವ ತಾಣಗಳಾಗಿವೆ. ಆದರೆ ಫ್ರೀ ಇರುವ ಸಮಯಗಳಲ್ಲಿ ಹೀಗೆ ಅಡ್ಡಾಗಳಲ್ಲಿ ಸುತ್ತಾಡುವುದಕ್ಕೆ ನಮ್ಮ ಯಾವುದೇ ಅಧ್ಯಾಪಕರು ಅನಗತ್ಯವಾಗಿ ನಮ್ಮನ್ನು ಬೈಯುವುದಿಲ್ಲ. ತರಗತಿಗಳು ಇಲ್ಲದಿರುವಾಗ ನಮ್ಮಷ್ಟಕ್ಕೇ ಇರಲು ಬಿಡುತ್ತಾರೆ’  ಎನ್ನುತ್ತಾರೆ ಇನ್ನೋರ್ವ ವಿದ್ಯಾರ್ಥಿನಿ ಫ್ರಾನ್ಸಿಸ್ಕಾ.ಕಾಲೇಜಿನ ರೆಸ್ಟ್‌ರೂಂ ಕೂಡ ವಿದ್ಯಾರ್ಥಿನಿಯರಿಗೆ ಬಹು ಪ್ರಯೋಜನಕಾರಿ. ‘ರೆಸ್ಟ್‌ರೂಂ ಎನ್ನುವುದು ಇನ್ನೊಂದು ಪ್ರಪಂಚ. ತರಗತಿಗಳ ನಡುವೆ ಸ್ವಲ್ಪ ಫ್ರೆಷ್ ಆಗಲು ರೆಸ್ಟ್ ರೂಂ ಬೇಕೇ ಬೇಕು. ನಮ್ಮಲ್ಲಿ ಸೀನಿಯರ್, ಜೂನಿಯರ್ ಎಂಬ ಅಹಂ ಇಲ್ಲದೇ ಇರುವುದರಿಂದ ಫ್ರೀಯಾಗಿ ಎಲ್ಲರೊಂದಿಗೆ ಬೆರೆಯುತ್ತೇವೆ. ಜೋಕ್‌ಗಳನ್ನು ಹೇಳಿಕೊಂಡು ಕೆಲವೊಮ್ಮೆ ಸಿಲ್ಲಿ ಸಿಲ್ಲಿ ಕಮೆಂಟ್‌ಗಳನ್ನು ಪಾಸ್ ಮಾಡುತ್ತೇವೆ. ರೆಸ್ಟ್‌ರೂಂ ಯಾವಾಗಲೂ ನಮ್ಮ ಮಾತುಗಳು ಮತ್ತು ನಗುವಿನಿಂದ ಪ್ರತಿಧ್ವನಿಸುತ್ತಿರುತ್ತದೆ ಎನ್ನುತ್ತಾರೆ ರೇಚೆನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry