ಮಧ್ಯಂತರ ಪರಿಹಾರಕ್ಕೆ ಒತ್ತಾಯ

7

ಮಧ್ಯಂತರ ಪರಿಹಾರಕ್ಕೆ ಒತ್ತಾಯ

Published:
Updated:

ಬೆಳಗಾವಿ: ಆರನೇ ವೇತನ ಆಯೋಗವನ್ನು ಕೂಡಲೇ ರಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾಧ್ಯಮಿಕ ಶಾಲಾ, ಪದವಿಪೂರ್ವ, ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಮಹಾವಿದ್ಯಾಲಯಗಳ ನೌಕರರ ಸಂಘದ ಸದಸ್ಯರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.ಪಕ್ಕದ ಮಹಾರಾಷ್ಟ್ರ ಸರ್ಕಾರವು 6ನೇ ವೇತನ ನೀಡಿ ನೌಕರರ ರಕ್ಷಣೆಗೆ ಮುಂದಾಗಿದೆ. ಬೆಲೆ ಏರಿಕೆಯಿಂದಾಗಿ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.ವೇತನ ಜಾರಿಗೆ ಬರುವವರೆಗೂ ಮಧ್ಯಂತರ ಪರಿಹಾರ ಎಂದು ಶೇ. 30 ರಷ್ಟು ತುಟ್ಟಿಭತ್ಯೆ ನಿಡಬೇಕು. ವೇತನ ತಾರತಮ್ಯ ನಿವಾರಿಸಬೇಕು ಎಂದು ಆಗ್ರಹಿಸಿದರು.

1995ರ ವರೆಗೆ ಅನುದಾನಕ್ಕೆ ಒಳಪಟ್ಟಿರುವ ಶಾಲಾ- ಕಾಲೇಜುಗಳಿಗೆ ಹಾಕಲಾಗಿರುವ ಆರ್ಥಿಕ ಮಿತವ್ಯಯ ಸಡಿಲಿಸಬೇಕು ಎಂದು ರಾಜ್ಯ ಘಟಕದ ಅಧ್ಯಕ್ಷ ಎಸ್.ಎಸ್. ಮಠದ, ಪ್ರಧಾನ ಕಾರ್ಯದರ್ಶಿ ಸಲೀಮ್ ಕಿತ್ತೂರ, ಪಿ.ಪಿ. ಬೆಳಗಾಂವಕರ, ಕೆ.ಬಿ. ಹಿರೇಮಠ ಮತ್ತಿತರರು ಮನವಿ ಮಾಡಿಕೊಂಡರು.ಅನುದಾನಕ್ಕೆ ಕೋರಿಕೆ

ಆರನೇ ವೇತನ ಆಯೋಗ ಜಾರಿಗೊಳಿಸಲು ಮುಂಗಡ ಪತ್ರದಲ್ಲಿ ಅನುದಾನ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕ ಸದಸ್ಯರು ಶನಿವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ವೇತನ ಭತ್ಯೆಗಳನ್ನು ಪರಿಷ್ಕರಿಸಿವೆ. ಅದೇ ಮಾದರಿಯಲ್ಲಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಅಧ್ಯಕ್ಷ ಸುನೀಲ್ ಮೂಗಿ, ಕಾರ್ಯದರ್ಶಿ ರಾಹುಲ್ ಮೇತ್ರಿ, ಉಪಾಧ್ಯಕ್ಷ ಬಸವರಾಜ ಚನ್ನಯ್ಯನವರ, ಯಲ್ಲಪ್ಪ ಬಾಳಿಗಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry