ಶನಿವಾರ, ನವೆಂಬರ್ 23, 2019
17 °C

ಮಧ್ಯಪ್ರದೇಶಕ್ಕೆ ಸಿಂಹಗಳ ಸ್ಥಳಾಂತರ: ಅನುಮತಿ

Published:
Updated:

ನವದೆಹಲಿ (ಪಿಟಿಐ): ಗುಜರಾತ್‌ನಲ್ಲಿರುವ ಸಿಂಹಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.

ಅಳಿವಿನಂಚಿನಲ್ಲಿರುವ ಈ ಪ್ರಭೇದಗಳಿಗೆ ಎರಡನೇ ಮನೆಯ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಕೆ.ಎ. ರಾಧಾಕೃಷ್ಣನ್ ಮತ್ತು ಸಿ.ಕೆ. ಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠ  ಅಭಿಪ್ರಾಯ ಪಟ್ಟಿದೆ. ಸಿಂಹಗಳ ಸ್ಥಳಾಂತರಕ್ಕೆ 6 ತಿಂಗಳ ಕಾಲಾವಕಾಶ ನ್ಯಾಯಪೀಠ ನೀಡಿದೆ. ಪ್ರಸ್ತುತ, ಗಿರ್ ಅಭಯಾರಣ್ಯದಲ್ಲಿ 400 ಸಿಂಹಗಳಿವೆ.ಆಫ್ರಿಕಾ ಚೀತಾ ಬೇಡ: ಈ ಮಧ್ಯೆ, ನಮೀಬಿಯಾದಿಂದ ಆಫ್ರಿಕಾ ಚೀತಾಗಳನ್ನು ಭಾರತಕ್ಕೆ ಕರೆತರುವುದಕ್ಕೆ  ಅವಕಾಶ ನೀಡಲು ನ್ಯಾಯಾಲಯ ನಿರಾಕರಿಸಿದೆ.  ಕಾಡೆಮ್ಮೆ, ದ ಗ್ರೇಟ್ ಇಂಡಿಯನ್ ಬಸ್ಟರ್ಡ್‌ನಂತಹ ಅಳಿವಿನಂಚಿನಲ್ಲಿರುವ ಸ್ಥಳೀಯ ಪ್ರಭೇದಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ರೂ 300 ಕೋಟಿ ವೆಚ್ಚದ ಚೀತಾ ಪುನರ್‌ಪರಿಚಯ ಕಾರ್ಯಕ್ರಮದ ಅಡಿಯಲ್ಲಿ ಆಫ್ರಿಕಾ ಚೀತಾಗಳನ್ನು ಭಾರತಕ್ಕೆ ತರುವ ಯೋಜನೆಯನ್ನು ಪರಿಸರ ಮತ್ತು ಅರಣ್ಯಗಳ ಇಲಾಖೆ ಪ್ರಸ್ತಾಪಿಸಿತ್ತು.

ಪ್ರತಿಕ್ರಿಯಿಸಿ (+)