ಸೋಮವಾರ, ಜೂನ್ 21, 2021
21 °C

ಮಧ್ಯಪ್ರದೇಶ: ಅಕಾಲಿಕ ಮಳೆಗೆ ಬೆಳೆಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್(ಪಿಟಿಐ): ಅಕಾಲಿಕ ಆಲಿಕಲ್ಲು ಮಳೆಯಿಂದ ಮಧ್ಯಪ್ರದೇಶದಲ್ಲಿ ಬೆಳೆಗೆ ತೀವ್ರ ಹಾನಿಯಾಗಿದ್ದು,ರೈತರಿಗೆ ₨ 13,000 ಕೋಟಿ ನಷ್ಟವಾಗಿರುವುದಾಗಿ ವರದಿ ಯಾಗಿದೆ  ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.ನೈಸರ್ಗಿಕ ವಿಕೋಪದಿಂದ  ರಾಜ್ಯದಲ್ಲಿ  ಹಿಂಗಾರು ಬೆಳೆಯ ಇಳುವರಿಯಲ್ಲಿ ಶೇ 10ರಷ್ಟು   ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಶ್ ರಾಜೋರ ಹೇಳಿದ್ದಾರೆ.  ಆಲಿಕಲ್ಲು ಮಳೆಯಿಂದಾಗಿ 26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದ್ದು, ಸರ್ಕಾರ ಪರಿಹಾರ ಧನವನ್ನು ₨ 2000 ದಿಂದ ₨ 2600 ಕೋಟಿಗೆ ಏರಿಸಿದೆ ಎಂದು ಚೌಹಾಣ್ ತಿಳಿಸಿದ್ದಾರೆ.  ಜತೆಗೆ ಶೇ.50ರಷ್ಟು ಬೆಳೆ ನಷ್ಟವಾಗಿರುವ ರೈತರಿಗೆ ಒಂದು ರೂಪಾಯಿಗೆ ಅಕ್ಕಿ ಮತ್ತು ಗೋದಿ ನೀಡುವುದಾಗಿ ಮುಖ್ಯಮಂತ್ರಿ ಚೌಹಾಣ್ ಘೋಷಿಸಿದ್ದಾರೆ.ಮಳೆಯಿಂದಾಗಿ ಒಟ್ಟು 30,000 ಹಳ್ಳಿಗಳು ಸಂಕಷ್ಟಕ್ಕೆ ಒಳಗಾಗಿರುವುದರ  ಜೊತೆಗೆ 20 ಲಕ್ಷ ಟನ್ ಗೋದಿ, 10 ಲಕ್ಷ ಟನ್ ಬೇಳೆ, 3 ಲಕ್ಷ ಟನ್ ಕಾಳು ಮತ್ತು 1.5 ಲಕ್ಷ ಟನ್ನಷ್ಟು ಇತರ ಬೆಳೆಗಳು ನಷ್ಟಕ್ಕೆ ಈಡಾಗಿವೆ ಎಂದೂ ಅವರು ಹೇಳಿದ್ದಾರೆ.

ಕೇಂದ್ರ ತಂಡವನ್ನು ಕಳುಹಿಸಲು ಕೋರಿರುವ ಮುಖ್ಯಮಂತ್ರಿ ಚೌಹಾಣ್ ಬೆಳೆ ಪರಿಹಾರಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.