ಮಧ್ಯರಾತ್ರಿ ಕಾರ್ಯಾಚರಣೆ: ದೆಹಲಿ ಪೊಲೀಸರ ಸಮರ್ಥನೆ

ಸೋಮವಾರ, ಜೂಲೈ 22, 2019
26 °C

ಮಧ್ಯರಾತ್ರಿ ಕಾರ್ಯಾಚರಣೆ: ದೆಹಲಿ ಪೊಲೀಸರ ಸಮರ್ಥನೆ

Published:
Updated:

ನವದೆಹಲಿ (ಪಿಟಿಐ): ನಗರದ ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಪ್ರತಿಭಟನೆ ನಿರತರಾಗಿದ್ದ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಬೆಂಬಲಿಗರ ಮೇಲೆ ನಡೆಸಲಾದ ಮಧ್ಯರಾತ್ರಿಯ ಕಾರ್ಯಾಚರಣೆಯನ್ನು ದೆಹಲಿ ಪೊಲೀಸರು ಶುಕ್ರವಾರ ಸುಪ್ರೀಕೋರ್ಟ್ ನಲ್ಲಿ ಸಮರ್ಥಿಸಿಕೊಂಡರು.ನ್ಯಾಯಾಲಯಕ್ಕೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ ~ಯೋಗ ಶಿಬಿರಕ್ಕೆ ಅವಕಾಶ ನೀಡಲಾಗಿತ್ತೇ ಹೊರತು ಬೇರಾವುದೇ ಉದ್ದೇಶದ ಸಮಾವೇಶಕ್ಕೆ ಅವಕಾಶ ನೀಡಲಾಗಿರಲಿಲ್ಲ~ ಎಂದು ಪೊಲೀಸರು  ಪ್ರತಿಪಾದಿಸಿದರು.~5000 ಜನರಿಗೆ ಸಮಾವೇಶಗೊಳ್ಳಲು ಮಾತ್ರವೇ ಅವಕಾಶ ನೀಡಲಾಗಿತ್ತು. ಆದರೆ ಕಾರ್ಯಾಚರಣೆ ನಡೆದ ಜೂನ್ 4 ಮತ್ತು 5 ರ ನಡುವಣ ರಾತ್ರಿಯಲ್ಲಿ 20,000ಕ್ಕೂ ಹೆಚ್ಚು ಜನ ರಾಮಲೀಲಾ ಮೈದಾನದಲ್ಲಿ ಜಮಾಯಿಸಿದ್ದರು~ ಎಂದೂ ಪ್ರಮಾಣ ಪತ್ರ ಹೇಳಿತು.ರಾಮದೇವ್ ಬೆಂಬಲಿಗರು ಪೊಲೀಸ್ ಸಿಬ್ಬಂದಿಯತ್ತ ಕಲ್ಲು ತೂರಾಟ ಆರಂಭಿಸಿದ ಬಳಿಕವೇ ಆಶ್ರುವಾಯು ಪ್ರಯೋಗಿಸಲಾಯಿತು ಎಂದೂ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.ಮಧ್ಯರಾತ್ರಿ ಕಾರ್ಯಾಚರಣೆಯನ್ನು ತಾನಾಗಿಯೇ ಗಮನಿಸಿದ ಸುಪ್ರೀಂಕೋರ್ಟ್ ಸ್ವ-ಇಚ್ಛೆಯ ನೋಟಿಸ್ ಜಾರಿ ಮಾಡಿದ್ದನ್ನು ಅನುಸರಿಸಿ ಪೊಲೀಸರು ನ್ಯಾಯಾಲಯಕ್ಕೆ ಈ ಸಮರ್ಥನೆಯನ್ನು ಸಲ್ಲಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry