ಗುರುವಾರ , ಅಕ್ಟೋಬರ್ 17, 2019
22 °C

ಮಧ್ಯವರ್ತಿಗಳಿಂದ ದೂರವಿರಿ

Published:
Updated:

ಪಡುಬಿದ್ರಿ: ಅಲ್ಪಸಂಖ್ಯಾತ ನಿಗಮ ದಿಂದ ಸಿಗುವ ಸಾಲ ಸೌಲಭ್ಯ ಪಡೆಯಲು ಮಧ್ಯವರ್ತಿಗಳನ್ನು ನೆಚ್ಚಿ ಕೊಳ್ಳದೆ ನೇರವಾಗಿ ಕಚೇರಿಯನ್ನು ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿ ಅಬ್ದುಲ್ ರಝಾಕ್ ಹೇಳಿದ್ದಾರೆ.ನಿಗಮದ ವತಿಯಿಂದ ಪಡುಬಿದ್ರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಸಾಲ ಮರುಪಾವತಿ ಅಭಿಯಾನ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.`ಇತ್ತೀಚಿನ ದಿನಗಳಲ್ಲಿ ನಿಗಮದ ವತಿಯಿಂದ ನೀಡುವ ಸಾಲಕ್ಕಾಗಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇಂತಹ ಮಧ್ಯವರ್ತಿಗಳಿಗೆ ಯಾರೂ ಬಲಿ ಯಾಗಬಾರದು~ ಎಂದರು.`ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಹಮ್ಮಿಕೊಂಡ ಯೋಜನೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು~ ಎಂದರು.ನಿಗಮದ ಜಿಲ್ಲಾ ಅಧಿಕಾರಿ ಶ್ರೀಧರ ಭಂಡಾರಿ ಮಾತನಾಡಿ, `ನಿಗಮದ ಸಾಲ ಪಡೆಯಲು ಕೆಲವು ಬ್ಯಾಂಕ್‌ಗಳು ಅಧಿಕಾರಿಗಳು ನಿರಾಕರಿಸುತ್ತಿದ್ದು, ಇನ್ನು ಕೆಲವಡೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ದೂರುಗಳು ಇದ್ದಲ್ಲಿ ನೇರ ಕಚೇರಿಗೆ ಬಂದು ತಿಳಿಸಿ~ ಎಂದರು. ಗ್ರಾ.ಪಂ ಸದಸ್ಯ ಎಸ್.ಪಿ.ಉಮರ್ ಫಾರೂಕ್ ಇದ್ದರು.

 

Post Comments (+)