ಮನಗ್ದ್ದೆದಿತು ಭಾಷೆ !

7

ಮನಗ್ದ್ದೆದಿತು ಭಾಷೆ !

Published:
Updated:

ಚಿಂತಾಮಣಿ : ಇಲ್ಲಿನ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ತಾಲ್ಲೂಕು ಕೆಂಚಾರ‌್ಲಹಳ್ಳಿಯ ಬಾಪೂಜಿ ಪ್ರೌಢಶಾಲೆ ಆವರಣದಲ್ಲಿ `ಅಚ್ಚ-ಕನ್ನಡ,ಸ್ವಚ್ಛ- ಕನ್ನಡ~ ಕಾರ್ಯಕ್ರಮ ನಡೆಯಿತು.

ಶಾಲಾ ಮಕ್ಕಳು ದೇಶದ ಹಲವು ಪ್ರಚಲಿತ ವಿದ್ಯಮಾನಗಳ  ಕುರಿತು ಯಾವುದೇ  ಇತರ ಭಾಷೆಯ ಪದಗಳನ್ನು ಬಳಸದೇ ಎಲ್ಲರ ಮನಗೆದ್ದರು.ಕೆಲವು ವಿದ್ಯಾರ್ಥಿಗಳು ಕನ್ನಡದ ಕವಿ ಪುಂಗವರ ಬದುಕು ಬರಹಗಳ ಕುರಿತು  ಆರ್ಥಪೂರ್ಣವಾಗಿ ತಿಳಿಯಪಡಿಸುವ ಮೂಲಕ  ಕಾವ್ಯಲೋಕದ ದಿಗ್ಗಜಗರಿಗೆ ನುಡಿ ನಮನ ಸಲ್ಲಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಚಾಲಕ ಎನ್.ದಾಮೋದರರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜನಪದ ಗಾಯಕ ಸೀಕಲ್ ನರಸಿಂಹಪ್ಪ, ಡಿ.ಎಂ.ಮಹೇಶ್ ಕುಮಾರ್, ವಿ.ನಾರಾಯಣರೆಡ್ಡಿ, ಎ.ಹನುಮಂತಯ್ಯ, ಎಸ್.ಸಿ.ಶ್ರೀನಿವಾಸರೆಡ್ಡಿ ವಿವಿಧ ಗೀತೆಗಳನ್ನು ಹಾಡಿದರು.ಪೊಲೀಸ್ ಇಲಾಖೆ ವಿಶ್ವನಾಥ್ ಅವರು `ಸಂಗೋಳ್ಳಿರಾಯಣ್ಣ~ ನಾಟಕದ ದೃಶ್ಯಗಳ ಅಭಿನಯ ನೀಡಿದರು. ಮುಳ್ಳಹಳ್ಳಿ ನಂಜುಂಡೇಗೌಡ  ಹಾಸ್ಯಕಾರ್ಯಕ್ರಮ ನಡೆಸಿಕೊಟ್ಟರು.ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಗತಿ ವಿ.ವೆಂಕಟರತ್ನಂ ಮಾತನಾಡಿದರು.

 ಚಿಂತಾಮಣಿ ಸರ್ಕಾರಿ ಬಾಲಕರ ಪ್ರೌಢಶಾಲೆ ವಿದ್ಯಾರ್ಥಿ ಮಹೇಶ್ ಏರ್ಪಡಿಸಿದ್ದ ವಿವಿಧ ದೇಶಗಳ ನಾಣ್ಯ ಮತ್ತು ನೋಟುಗಳ  ಪ್ರದರ್ಶನ ಎಲ್ಲರ ಗಮನಸೆಳೆಯಿತು.ಶಾಲಾ ಸಂಸ್ಥಾಪಕ ಜೆ.ಎಸ್.ಬಾಬುರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಬೈರಾರೆಡ್ಡಿ ನಿವೃತ್ತ ಮುಖ್ಯ ಶಿಕ್ಷಕ ಡಿ.ಕೆ.ಕೃಷ್ಣಪ್ಪ, ರಾಯಲ್ ಶಿ.ಮ.ಮಂಜುನಾಥ್, ಕೆ.ಎಸ್.ನೂರುಲ್ಲಾ ಇತರರಿದ್ದಾರೆ.`ಅಚ್ಚ ಕನ್ನಡತಿ~ ಪ್ರಶಸ್ತಿಯನ್ನು ನೇತ್ರಾವತಿ ಹಾಗೂ  ಮನೋಜ್ `ಅಚ್ಚ ಕನ್ನಡಿಗ~  ಪ್ರಶಸ್ತಿ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry