ಸೋಮವಾರ, ಅಕ್ಟೋಬರ್ 21, 2019
23 °C

ಮನದ ಕಲ್ಮಶ ತೊಳೆಯಲು ಧರ್ಮ ಅವಶ್ಯ

Published:
Updated:

ಹಾವೇರಿ: `ಕನ್ನಡ ನಾಡು ಅನೇಕ ಧರ್ಮಗಳ ಬೀಡಾಗಿದ್ದು, ಮನೆ, ಮನಗಳಿಗೆ ಅಂಟಿಕೊಂಡಿರುವ ಕಲ್ಮಶವನ್ನು ತೊಳೆಯಲು ಧರ್ಮ ಅವಶ್ಯವಾಗಿದೆ~ ಎಂದು ಎಂ.ಸಿ.ಚರಂತಿಮಠ ಹೇಳಿದರು. ತಾಲ್ಲೂಕಿನ ಹೊಸರಿತ್ತಿಯ ಗುದ್ದಲೀಶ್ವರ ಶ್ರೀಗಳ ಷಷ್ಟ್ಯಬ್ದಿ ಸಮಾರಂಭದಲ್ಲಿ ಹಮ್ಮಿಕೊಂಡ ಸರ್ವಧರ್ಮ ಸಮಾವೇಶದಲ್ಲಿ ಅವರು ಮಾತನಾಡಿದರು. ಧರ್ಮಗುರು ಹಫೀಜ್ ಸುಫೀಯಾನ ಮಾತನಾಡಿ, ಜಗತ್ತು ಸಣ್ಣದಾದಂತೆ ಮನುಷ್ಯನ ಮನಸ್ಸು ಮನಸ್ಸುಗಳು ದೂರವಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದು, ಮುಸಿಂ್ಲ, ಜೈನ್, ಕೈಸ್ತ ಬಾಂದವರೆಲ್ಲರೂ ಒಂದಾಗಿದ್ದರಿಂದಲೇ ನಮಗೆ ಸ್ವಾತಂತ್ರ್ಯ ದೊರೆಯಿತು ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದು ಹೇಳಿದರು.ಅಂತೋನಿ ಪರ್ನಾಂಡಿಸ್ ಮಾತನಾಡಿ, ಪ್ರತಿಯೊಬ್ಬರು ಒಳ್ಳೆಯವರಾಗಿತ್ತಾರೆ. ಆದರೆ, ಅವರ ಸುತ್ತಮುತ್ತಲಿನ ಪರಿಸರ ಆತನನ್ನು ಒಳ್ಳೆಯ, ಕೆಟ್ಟ ವ್ಯಕ್ತಿ ಎಂಬುದನ್ನು ನಿರ್ಧರಿಸುತ್ತದೆ. ಧರ್ಮದ ಆಧಾರದ ಮೇಲೆ ನಡೆದುಕೊಂಡರೆ, ಪ್ರತಿಯೊಬ್ಬರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಸಂಯುಕ್ತ ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡರ ಮಾತನಾಡಿ, ಗುದ್ದಲೀಶ್ವರ ಶ್ರೀಗಳು ತಮ್ಮ 60 ವರ್ಷಗಳ ಜೀವನದಲ್ಲಿ ಅನೇಕ ಸಾಮಾಜಿಕ ಧಾರ್ಮಿಕ ಸೇವೆಯನ್ನು ಈ ಸಮಾಜಕ್ಕೆ ಸಲ್ಲಿಸಿದ್ದಾರೆ. ಮಾನವ ಧರ್ಮವನ್ನು ಕಟ್ಟುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದು ಹೇಳಿದರು. ಮಾಜಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿದರು. ಹೊಸರಿತ್ತಿಯ ಗುದ್ದಲೀಶಿವಯೋಗಿಶ್ವರ ಶ್ರೀಗಳು, ಐರಣಿಯ ಬಸವರಾಜ ದೇಶಿಕೇಂದ್ರ ಶ್ರೀಗಳು,  ಅಥಣಿ, ಅಗಡಿ ಗಚ್ಚಿನಮಠ ಮಠದ ಚನ್ನಬಸವ ಶ್ರೀಗಳು ನೀಲಗುಂದ ವೀರಕ್ತಮಠದ ಚನ್ನಬಸವ ಶ್ರೀಗಳು, ಕೊಟ್ರೇಶಪ್ಪ ಬಸೆಗಣ್ಣಿ, ಎಂ.ಎಸ್.ಕೋರಿಶೆಟ್ಟರ ಹಾಜರಿದ್ದರು.

Post Comments (+)