ಸೋಮವಾರ, ನವೆಂಬರ್ 18, 2019
22 °C

`ಮನದ...' ಸಂಗೀತ

Published:
Updated:

ಮಹೇಶ್ ಆನೇಕಲ್ ಅವರು ನಿರ್ಮಿಸುತ್ತಿರುವ `ಮನದ ಮರೆಯಲ್ಲಿ' ಚಿತ್ರಕ್ಕೆ ರಾಜೇಶ್‌ರಾಮನಾಥ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.ಡಾ. ರಾಜ್‌ರ ನೇತ್ರದಾನ ಚಿತ್ರಕ್ಕೆ ಸ್ಫೂರ್ತಿ. ನಿರ್ದೇಶಕರು ಎ.ಎಚ್.ರಾಜೀವ್‌ನೇತ್ರ. `ಒಲವೇ ಮಂದಾರ' ಖ್ಯಾತಿಯ ಶ್ರೀಕಾಂತ್ ನಾಯಕ ನಟ. ವಿಂಧ್ಯಾ ನಾಯಕಿಯಾಗಿ ನಟಿಸುತ್ತಿದ್ದು ವಿಶೇಷ ಪಾತ್ರದಲ್ಲಿ ಅಜೇಯ್‌ರಾವ್ ಅಭಿನಯಿಸಿದ್ದಾರೆ. ಅನಂತನಾಗ್, ರಂಗಾಯಣರಘು, ಸಂದೀಪ್, ಮಮತಾ ರಾಹುತ್, ಪ್ರತೀಕ್ಷಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ನವೀನ್ ಸುವರ್ಣ ಛಾಯಾಗ್ರಹಣ, ಎಂ.ಯೋಗೇಂದ್ರ ನೃತ್ಯ ನಿರ್ದೇಶನ ಹಾಗೂ ಎನ್.ಕೆ.ಕುಮಾರ್ ಕಲಾ ನಿರ್ದೇಶನವಿದೆ.

ಪ್ರತಿಕ್ರಿಯಿಸಿ (+)