ಮನಮುಟ್ಟಿದ ಮಹಮ್ಮದ್ ರಫಿ ಹಾಡು

7

ಮನಮುಟ್ಟಿದ ಮಹಮ್ಮದ್ ರಫಿ ಹಾಡು

Published:
Updated:

ಹಳಿಯಾಳ: ಹಳೆಯ ಚಿತ್ರ ಸಂಗೀತ ಪ್ರೇಮಿಗಳ ಸಂಘ(ಹಚಿಸಂಪ್ರೇಸಂ)ವು ಖ್ಯಾತ ಹಿನ್ನೆಲೆ ಗಾಯಕ ದಿ. ಮಹಮ್ಮದ್ ರಫಿ ಜನ್ಮದಿನಾಚರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ‘ರಫಿ ಕೀ ಸುನಹರಿ ಯಾದೇ’ ಸಂಗೀತ ಕಾರ್ಯಕ್ರಮ ಮನಮುಟ್ಟಿತು. ಸ್ಥಳೀಯ ಪೊಲೀಸ್ ಠಾಣೆಯ ಎದುರಿನ ಶ್ರೀ ದುರ್ಗಾದೇವಿ ಕಲಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಸಂಘದ ಪ್ರಧಾನ ಪೋಷಕ, ಕಾರವಾರದ ಕೆ.ಡಿ.ಡಿ.ಸಿ. ಜಂಟಿ ನಿರ್ದೇಶಕ ಹಾಗೂ ಫಾ. ಲಾರೆನ್ಸ್ ಫರ್ನಾಂಡಿಸ್ ಉದ್ಘಾಟಿಸಿದರು.ಸಂಘದ ಹವ್ಯಾಸಿ ಕಲಾವಿದರಾದ ಡಾ. ಎಚ್.ಎ. ಇಳಕಲ್ ಹಾಗೂ ರವಿ ನಾಯರ್ ‘ಆಶಾ’ ಸಿನಿಮಾದ ಭಕ್ತಿಗೀತೆ ‘ತುನೆ ಬುಲಾಯಾ ಶೇರೋವಾಲಿಯೇ’ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಸಂಘದ ಅಧ್ಯಕ್ಷ ಡಾ. ಸಿ.ಎಸ್. ಓಶೀಮಠ ಸಾದರ ಪಡಿಸಿದ ‘ಸ್ಟ್ರೀಟ್ ಸಿಂಗರ್’ ಚಿತ್ರದ ‘ಬಿನಾ ತುಮ್ಹಾರೆ ವಜಾ ಕ್ಯಾ ಹೈ ಐಸೆ ಜೀನೆ ಮೆ’ ಹಾಗೂ ‘ಜಾಗೃತಿ’ ಚಿತ್ರದ ‘ಹಮ್ ಲಾಯೆ ಹೈ ತುಫಾನ್‌ಸೆ ಕಷ್ತಿ ನಿಕಾಲಕೆ’ ಹಾಗೂ ಡಾ. ಇಳಕಲ್ ಹಾಡಿದ ‘ಚೌದವಿ ಕಾ ಚಾಂದ್ ಹೋ” ಗೀತೆಗಳು ಪ್ರೇಕ್ಷಕರನ್ನು ರಂಜಿಸಿದವು.ಸಂಘದ ಉತ್ಸಾಹಿ ಗಾಯಕ ರವಿ ನಾಯರ್ ಹಾಡಿದ ‘ಬ್ಲಫ್ ಮಾಸ್ಟರ್’ ಚಿತ್ರದ ‘ಗೋವಿಂದಾ ಆಲಾರೆ’ ಹಾಗೂ ಶರ್ಮಿಲಾ ಹಿರೇಮಠರೊಂದಿಗೆ ಸಾದರ ಪಡಿಸಿದ ‘ಆದಾಲತ್’ ಚಿತ್ರದ ‘ಜಮೀನ್ ಸೆ ಹಮೇ ಆಸಮಾ ಪರ’ ಶ್ರೋತೃಗಳ ಮನಗೆದ್ದವು. ಅರುಣ ಗೊಂಧಳಿ ಹಾಡಿದ ‘ದೋಸ್ತಿ’ ಚಿತ್ರದ ‘ಜಾನೇವಾಲೋ ಜರಾ ಮುಡಕೆ ದೇಖೋ ಮುಝೇ” ಗೀತೆ ಪ್ರಶಂಸೆ ಪಡೆದವು.ಸಂಘದ  ಕಲಾವಿದ ವಾಸುದೇವ ಐಕೃತ್ ‘ಪ್ರಿನ್ಸ್’ ಚಿತ್ರದ ‘ಬದನ್ ಪೆ ಸಿತಾರೆ ಲಪೇಟೆ ಹುಯೆ’, ದೀಪಾ ಕುಲಕರ್ಣಿ ಹಾಗೂ ಅರುಣ ಗೋಂದಳಿ ಹಾಡಿದ ‘ಕಾಲಾ ಪಾನಿ’ ಸಿನಿಮಾದ “ಅಚ್ಚಾಜಿ ಮೈ ಹಾರಿ ಚಲೋ ಮಾನ್ ಭಿ ಜಾವೋನಾ’ ಹಾಡುಗಳು ಪ್ರೇಕ್ಷಕರ ಕರತಾಡನ ಪಡೆದವು. ಕಾರ್ಯಕ್ರಮದಲ್ಲಿ ಮಹಮ್ಮದ್ ರಫಿಯವರ ಒಟ್ಟು 32 ಗೀತೆಗಳನ್ನು ಹಾಡಲಾಯಿತು. ಎಲ್ಲಾ ಗೀತೆಗಳಿಗೆ ಕೀ-ಬೋಡ್ ವಾದಕ ಅನಿಲ ಜೋಶಿ, ಢೋಲಕ್ ವಾದಕ ಗಜಾನನ  ಕಾಗಲಕರ ಹಾಗೂ ಗೀಟಾರ್ ವಾದಕ ಫ್ರಾನ್ಸಿಸ್ ಸಾಥ್ ನೀಡಿದರು.ಕಾರ್ಯಕ್ರಮದಲ್ಲಿ ಭದ್ರಾವತಿಯ ಸಿವಿಲ್ ನ್ಯಾಯಾಧೀಶ ಶಾಂತವೀರ, ಮೈಸೂರಿನ ಹುಲಿ ಯೋಜನೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜೆ. ಹೊಸಮಠ, ದಾಂಡೇಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸುನೀಲ ಪನವಾರ, ಶಿರಸಿಯ ಮನೋಜ ಕುಮಾರ, ಹಳಿಯಾಳ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ಭಟ್, ಉಪಅರಣ್ಯ ಸಂರಕ್ಷಣಾಧಿಕಾರಿ ಬಿ.ಬಿ ಮಲ್ಲೇಶ ಹಾಗೂ ತಹಸೀಲ್ದಾರ ಅಜೀಜ ಆರ್.ದೇಸಾಯಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಚಿಕ್ಕಮಠ, ಸಿ.ಪಿ.ಐ. ಉಮೇಶ ಶೇಟ್,  ಪ.ಪಂ. ಅಧ್ಯಕ್ಷೆ ಭಾರತಿ ಗೋಂದಳಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry