ಬುಧವಾರ, ಮೇ 12, 2021
17 °C

ಮನಮೋಹಕ ಮರದ ಮನೆ

ರಮೇಶ ಕೆ. Updated:

ಅಕ್ಷರ ಗಾತ್ರ : | |

 ಮನೆ ಕಟ್ಟುವ ಪರಿಕಲ್ಪನೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾಗುತ್ತಿದೆ. ಎಷ್ಟೇ ಹಣ ಖರ್ಚಾದರೂ ಸರಿಯೇ  ವಾಸಿಸುವ ಸೂರು ಆಕರ್ಷಕವಾಗಿರಬೇಕು, ನಾಲ್ಕಾರು ಮಂದಿ ಮೆಚ್ಚಬೇಕು ಎಂಬ ಮನೋಭಾವ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರಂತೂ ಸಿಮೆಂಟ್ ಕಟ್ಟಡಗಳ ಬದಲಿಗೆ ಸಂಪೂರ್ಣ ಮರದ ಮನೆಗಳ ನಿರ್ಮಾಣದತ್ತ ತಮ್ಮ ಚಿತ್ತ ಹರಿಸಿದ್ದಾರೆ.ಯೂರೋಪ್ ದೇಶಗಳಲ್ಲಿ  ಅಲ್ಲಿನ ವಾತಾವರಣಕ್ಕೆ ಪೂರಕವಾಗಿರಲು ಸಂಪೂರ್ಣ ಮರದಿಂದಲೇ ನಿರ್ಮಿಸಿದ ಮನೆಗಳನ್ನು ಕಾಣಬಹುದು. ಅವು ನೋಡಲು ಸುಂದರವಾಗಿಯೂ ಕಾಣುತ್ತವೆ. ಆ ಪರಿಕಲ್ಪನೆ ಈಗ ರಾಜ್ಯದಲ್ಲೂ ಕ್ರಮೇಣ ಜನಪ್ರಿಯವಾಗುತ್ತಿದೆ.ಬೆಂಗಳೂರಿನ ಮತ್ತೀಕೆರೆ ಮುಖ್ಯರಸ್ತೆಯಲ್ಲಿ 2008ರಲ್ಲಿ ಆರಂಭವಾದ `9 ವುಡನ್ ಹೋಮ್ಸ~ ಕಂಪನಿ, ಜನರ ಅಗತ್ಯ, ಇಷ್ಟಾನಿಷ್ಟಗಳಿಗೆ  ಪೂರಕವಾದ ವಿಶಿಷ್ಟ ವಿನ್ಯಾಸದ ಮರದ ಮನೆಗಳನ್ನು ಕಟ್ಟಿಸಿಕೊಡುತ್ತದೆ.ಈ ಸಂಸ್ಥೆ ನಲವತ್ತೈದು ದಿನಗಳಲ್ಲಿ ಅಂದದ ಮನೆಯನ್ನು ನಿರ್ಮಿಸಿಕೊಡುತ್ತದೆ. ಕೆನಡಾದಿಂದ ಎಸ್.ಪಿ.ಎಫ್ (ಸ್ಪ್ರೂಸ್, ಪೈನ್, ಫರ್) ಮರದ ಹಲಗೆಗಳನ್ನು ತರಿಸಿಕೊಂಡು, ಅದಕ್ಕೆ ಬೇಕಾದ ಆಕಾರಕೊಟ್ಟು ಚೆಂದದ ಮನೆ ಸಿದ್ಧಪಡಿಸುತ್ತದೆ.ಈಗಾಗಲೇ ಬೆಂಗಳೂರು, ಚಿಕ್ಕಮಗಳೂರು, ತುಮಕೂರು ಹಾಗೂ ಶಿರಾ ಸೇರಿದಂತೆ ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ಮರದ ಮನೆಗಳನ್ನು ಕಟ್ಟಿಸಿಕೊಟ್ಟಿದೆ.ಚಳಿಗಾಲದಲ್ಲಿ ಬೆಚ್ಚನೆ ಅನುಭವ ಹಾಗೂ ಬೇಸಿಗೆಯಲ್ಲಿ ತಂಪಾಗಿ ಇರುವುದರಿಂದ ಹಾಗೂ ದೊಡ್ಡ ಕಿಟಕಿಗಳನ್ನು ನಿರ್ಮಿಸುವುದರಿಂದ ಹೆಚ್ಚು ಬೆಳಕು ಮನೆಯ ಒಳಗಡೆ ಬರುತ್ತದೆ. ಇದರಿಂದ ವಿದ್ಯುತ್ ಕೂಡ ಉಳಿತಾಯವಾಗುತ್ತದೆ. ಭದ್ರತೆ ದೃಷ್ಟಿಯಿಂದ ಮನೆಗೆ ಲೋಹದ ಬಾಗಿಲು, ಕಿಟಕಿಗಳನ್ನೂ ಅಳವಡಿಸಿಕೊಳ್ಳಬಹುದು.ಒಂದು, ಎರಡು ಅಂತಸ್ತಿನ ಮನೆಗಳನ್ನು ಕಟ್ಟಿಸಿಕೊಡುವ ಕಂಪನಿಯು ಒಂದು ಚದರ ಅಡಿಗೆ ್ಙ 1300   ರಂತೆ ದರ ನಿಗದಿ ಮಾಡಿದೆ.  ಮರ, ಕಾರ್ಪೆಂಟರ್ ವೆಚ್ಚವೆಲ್ಲಾ ಕಂಪೆನಿಯೇ ಭರಿಸುತ್ತದೆ ಎನ್ನುತ್ತಾರೆ ಪ್ರಧಾನ ವ್ಯವಸ್ಥಾಪಕ ರಾಜೇಶ್ ಸಿಂಗ್.ಸಿಮೆಂಟ್, ಕಲ್ಲು ಹಾಸಿನ ಸಮಾನಾಂತರ ಅಡಿಪಾಯದಲ್ಲಿ ಮನೆ ಕಟ್ಟಲಾಗುತ್ತದೆ.   ಈಗಾಗಲೇ ಒಂದು ಅಂತಸ್ತಿನ ಸಿಮೆಂಟ್ ಕಟ್ಟಡವಿದ್ದರೆ, ಅದರ ಮೇಲಿನ ಅಂತಸ್ತನ್ನು ಮರದಲ್ಲಿ ಕಟ್ಟಿಸಬಹುದು.ಬಾತ್‌ರೂಮಿಗೆ ಟೈಲ್ಸ್‌ಗಳನ್ನು ಅಳವಡಿಸುವ ಮೂಲಕ ನೀರು ಮರದ ಮೇಲೆ ಬೀಳದಂತೆ ಕಾಪಾಡುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬಹುದು.ಮರದ ತುಂಡುಗಳನ್ನು `ಟಂಗ್ ಅಂಡ್ ಗ್ರೋ~ ವ್ಯವಸ್ಥೆ ಮೂಲಕ ಜೋಡಿಸಿರಲಾಗುತ್ತದೆ. ಮರದ ತುಂಡುಗಳ ಜೋಡಣೆಗೆ  ಸ್ಕ್ರೂಗಳನ್ನು ಉಪಯೋಗಿಸಲಾಗುತ್ತದೆ. ಹೀಗಾಗಿ ಕಟ್ಟಿದ ಮನೆಗಳನ್ನು ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ಸೌಲಭ್ಯವೂ ಇಲ್ಲಿದೆ.ಮರದ ಮನೆಯಾಗಿರುವುದರಿಂದ ಬೇಸಿಗೆಯಲ್ಲಿ ಬೆಂಕಿ ಅವಘಡಗಳಿಗೆ ತುತ್ತಾಗಬಹುದೆಂಬ ಅನುಮಾನಕ್ಕೆ ರಾಜೇಶ್ ಉತ್ತರ ನೀಡುವುದು ಹೀಗೆ; ಬೆಂಕಿ ತಗುಲದಂತೆ ಬೆಂಕಿ ನಿರೋಧಕ ಹೊದಿಕೆ (ಫೈರ್ ರಿಟಾರ್ಡೆಂಟ್ ಕೋಟ್) ವಿಧಾನದಿಂದ ಈ ಅವಘಡ ತಪ್ಪಿಸಬಹುದು ಎನ್ನುತ್ತಾರೆ.ಇನ್ನು ಬಿಸಿಲು, ಮಳೆಗೆ ಮರ ಹಾಳಾಗದಂತೆ ನೋಡಿಕೊಳ್ಳಲು ಮೇಲ್ಛಾವಣಿಗೆ ಮಂಗಳೂರು ಹೆಂಚುಗಳನ್ನು ಅಥವಾ ಡಾಂಬರು (ಹಾಸ್ಫಾಲ್ಟ್ ಷಿಂಗಲ್ಸ್) ಸೀಟುಗಳನ್ನು ಹಾಕಬೇಕು. ನೋಡಲು ಆಕರ್ಷಕವಾಗಿ ಕಾಣುವ ಹೆಂಚುಗಳ ಹೊದಿಕೆ ಮರದ ಗುಣಮಟ್ಟವನ್ನು ಕಾಪಾಡುತ್ತದೆ ಎಂದು ಅವರು ಅನುಮಾನಗಳನ್ನು ಪರಿಹರಿಸುತ್ತಾರೆ.312, 560 ಚದರ ಅಡಿ ಮನೆಗಳನ್ನು ಗರಿಷ್ಟ 45 ದಿನಗಳಲ್ಲಿ ಕಟ್ಟಿಕೊಡುತ್ತಾರೆ. ಫಾರ್ಮ್ ಹೌಸ್, ರೆಸಾರ್ಟ್ ಕೊಠಡಿಗಳು ಹಾಗೂ ವ್ಯಾಪಾರ ಉದ್ದೇಶದ ಚಿಕ್ಕ ಚಿಕ್ಕ ಅಂಗಡಿಗಳನ್ನೂ, ಮನೆ ಮುಂದೆ ಸಾಕು ಪ್ರಾಣಿಗಳಿಗಾಗಿ ಚಿಕ್ಕ ಗೂಡುಗಳು, ಭದ್ರತಾ ಸಿಬ್ಬಂದಿ ಕೊಠಡಿ ಹೀಗೆ ಅನೇಕ ನಮೂನೆಗಳ ಮನೆಗಳನ್ನು ಕಟ್ಟಿಸಿಕೊಳ್ಳಬಹುದು. ಇಂತಹ ಮರದ ಮನೆಗಳು ಸುಮಾರು ನೂರು ವರ್ಷ ಬಾಳಿಕೆ ಬರುತ್ತವೆ.ಗ್ರಾಮೀಣ ಪ್ರದೇಶ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆ, ಯಾವ ಸ್ಥಳಕ್ಕಾದರೂ ಬಂದು `9 ವುಡನ್‌ಹೋಮ್ಸ~ ಕಂಪನಿ ಸಿಬ್ಬಂದಿ ಮನೆ ನಿರ್ಮಿಸಿ ಕೊಡುತ್ತಾರೆ. ಸಾರಿಗೆ ವೆಚ್ಚ ಹಾಗೂ ಕೆಲಸಗಾರರು ಉಳಿದುಕೊಳ್ಳುವ ವೆಚ್ಚವನ್ನು ಮನೆ ಮಾಲೀಕರು ವಹಿಸಿಕೊಳ್ಳಬೇಕು.ಮಲೆನಾಡು, ಘಟ್ಟ ಪ್ರದೇಶ ಸೇರಿದಂತೆ ಸಮುದ್ರ ತೀರದಲ್ಲೂ ಹಾಗೂ ಇಳಿಜಾರು ಪ್ರದೇಶಗಳಲ್ಲೂ ಮನಮೋಹಕ ಮನೆಗಳನ್ನು ಕಟ್ಟಿಸಿಕೊಳ್ಳುವ ಮೂಲಕ ಮನೆಯ ಕಲ್ಪನೆ ಬದಲಾಯಿಸಿಕೊಂಡು ಕನಸಿನ ಮನೆ ನಿಮ್ಮದಾಗಿಸಿಕೊಳ್ಳಬಹುದು.ಮಾಹಿತಿಗೆ: 98451 18043, www.9woodenhomes.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.