ಮನರಂಜನೆಗೆ ಪ್ರಶಸ್ತಿ

7

ಮನರಂಜನೆಗೆ ಪ್ರಶಸ್ತಿ

Published:
Updated:
ಮನರಂಜನೆಗೆ ಪ್ರಶಸ್ತಿ

ಆರ್‌ಬಿಎನ್‌ಐಎಲ್ ಮತ್ತು 92.7 ಬಿಗ್ ಎಫ್‌ಎಂ ಜಂಟಿಯಾಗಿ ಆಯೋಜಿಸಿದ್ದ ಮನರಂಜನಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಸಿನಿಮಾ, ಸಂಗೀತ, ಕಿರುತೆರೆ, ನೃತ್ಯ, ರಂಗಭೂಮಿ ಹಾಗೂ ಕ್ರೀಡಾ ಕ್ಷೇತ್ರದ ಪ್ರತಿಭಾವಂತರಿಗೆ ಪ್ರಶಸ್ತಿ ನೀಡಲಾಯಿತು.  ಉಪೇಂದ್ರ, ಪುನೀತ್ ರಾಜ್‌ಕುಮಾರ್, ಯೋಗೀಶ್, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ಯೋಗರಾಜ ಭಟ್, ಗಾಯಕಿ ಚೈತ್ರಾ, ನಟಿಯರಾದ ನಿಧಿ ಸುಬ್ಬಯ್ಯ, ಹರಿಪ್ರಿಯಾ, ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ ಸೇರಿದಂತೆ ಪರಮ ಶಿವಂ, ಪಂಕಜ್ ಅಡ್ವಾಣಿ, ಈಜು ಪಟು ರಹೇನಾ ರೆಹಾನ್ ಪೂಂಚ, ಸರ್ಕಾರಿ ಅಧಿಕಾರಿ ಐ.ಎಂ.ವಿಠಲ ಮೂರ್ತಿ ಇದ್ದರು. ರಂಗಭೂಮಿ ವಿಭಾಗದಲ್ಲಿ ಬಿ.ಜಯಶ್ರೀ ಮತ್ತು ನೀನಾಸಂ ತಂಡ ಪ್ರಶಸ್ತಿ ಗಳಿಸಿತು. ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಅನುರಾಧಾ ಶ್ರೀಧರ್ ಹಾಗೂ ಶ್ರೀಧರ್ ಪ್ರಶಸ್ತಿ ಪಡೆದರು.ಕ್ರೀಡಾ ವಿಭಾಗದಲ್ಲಿ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಪ್ರಶಸ್ತಿ ಪಡೆದರು. ಸೆಲೆಬ್ರೆಟಿ ಪ್ರಶಸ್ತಿ ವಿಭಾಗದಲ್ಲಿ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅದ್ಭುತ ಟಿವಿ ನಿರೂಪಕ (‘ಎದೆ ತುಂಬಿ ಹಾಡುವೆನು’) ಪ್ರಶಸ್ತಿ ಪಡೆದರು. ಧಾರಾವಾಹಿ ವಿಭಾಗದಲ್ಲಿ ಮಂಡ್ಯ ರಮೇಶ್ ಮತ್ತು ಲಕ್ಷ್ಮಿಹೆಗ್ಡೆ ಪ್ರಶಸ್ತಿ ಪಡೆದರು. ಸಿನಿಮಾ ವಿಭಾಗದಲ್ಲಿ ‘ಯಕ್ಕ ರಾಜ ರಾಣಿ’ ಗೀತೆಗಾಗಿ ಯೋಗರಾಜ ಭಟ್ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಪ್ರಶಸ್ತಿ ಬಂತು. ಉಪೇಂದ್ರ ಮತ್ತು ಯೋಗರಾಜ್ ಭಟ್ ಅವರಿಗೆ ರಂಜಿಸಿದ ನಿರ್ದೇಶಕರು ಪ್ರಶಸ್ತಿ ಬಂತು. ಇವರೊಂದಿಗೆ ಮತ್ತಷ್ಟು ಸಾಧಕರಿಗೂ ಪ್ರಶಸ್ತಿ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry