ಮನರಂಜನೆಯಿಂದ ಮನೋವಿಕಾಸ

7

ಮನರಂಜನೆಯಿಂದ ಮನೋವಿಕಾಸ

Published:
Updated:
ಮನರಂಜನೆಯಿಂದ ಮನೋವಿಕಾಸ

ಬಳ್ಳಾರಿ: ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಮನರಂಜನೆಯನ್ನು ನೀಡುವ ಜತೆ ಮನೋವಿಕಾಸಕ್ಕೆ ದಾರಿಯಾ ಗುತ್ತವೆ. ನಿತ್ಯ ಎದುರಾಗುವ  ಜಂಜಡದಿಂದ ಹೊರಬಂದು ನೆಮ್ಮದಿಯ ಜೀವನ ನಡೆಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ ಯಾಗಿವೆ ಎಂದು ವಿಮ್ಸ ವೈದ್ಯ ಡಾ. ಮಂಜುನಾಥ ಅಭಿಪ್ರಾಯಪಟ್ಟರು.ಸ್ಥಳೀಯ ಸಾಂಸ್ಕೃತಿಕ ಸಮುಚ್ಚಯಯದಲ್ಲಿ ಶನಿವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಜುನಾಥ ಲಲಿತಾ ಕಲಾಬಳಗ ಹಾಗೂ ಸರ್ಕಾರಿ ನೌಕರರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿ ಸಿದ್ದ  `ಕಾವ್ಯ-    ಗಾಯನ- ಕುಂಚ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಜಿಲ್ಲೆ ಸಾಂಸ್ಕೃತಿಕ ರಂಗದಲ್ಲಿ ಮೇರು ಸ್ಥಾನದಲ್ಲಿದ್ದು, ಈ ಪರಂಪರೆಯನ್ನು ಮುಂದುವರೆಸಿ ಕೊಂಡು ಹೋಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಅವರು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಎಸ್‌ಜಿಟಿ ಕಾಲೇಜು ಅಧ್ಯಕ್ಷ ಎಸ್.ಎನ್. ರುದ್ರಪ್ಪ, ಸಾಹಿತಿ ಟಿ.ಎಚ್.ಎಂ. ಬಸವರಾಜ್, ಡಿ.ಶಿವಪ್ಪ, ಮಂಜುನಾಥ ಲಲಿತ ಕಲಾ ಬಳಗದ ಗೌರವಾಧ್ಯಕ್ಷ ಬಿ.ಎಂ. ಸಿದ್ಧಲಿಂಗಸ್ವಾಮಿ, ಕಾರ್ಯ ದರ್ಶಿ ನಾಗಭೂಷಣ, ಕವಯತ್ರಿ ಎ.ಎಂ. ಜಯಶ್ರೀ,  ಎ.ಸಿದ್ಧರಾಮೇಶ್ವರ ಗೌಡ ಹಾಜರಿದ್ದರು.ಜಿ.ಎಚ್. ರಾಮಕೃಷ್ಣರಾವ್, ಎಸ್.ಎಂ. ಶಿವ ರುದ್ರಯ್ಯ ಸ್ವಾಮಿ, ಕೆ. ಮಲ್ಲೇಶಪ್ಪ, ಕೆ.ಮಲ್ಲಿಕಾರ್ಜುನ, ತೇಜಸ್ವಿನಿ ವರ್ತಲೂರು ಹಾಗೂ ಕಿರಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ   ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಗೋವಿಂದವಾಡ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಅಮಾತಿ ಬಸವರಾಜ್ ವಂದಿಸಿದರು.ನಂತರ ನಡೆದ `ಕಾವ್ಯ- ಗಾಯನ- ಕುಂಚ~ ಕಾರ್ಯಕ್ರಮದಲ್ಲಿ ಮಂಜುನಾಥ ಗೋವಿಂದವಾಡ ಅವರು ಕವಿಗಳ ಕಾವ್ಯಗಳ ಭಾವಕ್ಕೆ ಅನುಗುಣವಾಗಿ ಚಿತ್ರರಚಿಸಿ, ಜನರ ಪ್ರಶಂಸೆಗೆ ಪಾತ್ರರಾದರು.ಯಲ್ಲನಗೌಡ ಶಂಕರಬಂಡೆ ಮತ್ತು ತಂಡದವರು ಸಮೂಹ ಗಾಯನ ಕಾರ್ಯಕ್ರಮವನ್ನು ಕನ್ನಡ ಸಾಹಿತಿಗಳ ಗೀತೆ, ಭಾವಗೀತೆ, ತತ್ವಪದ, ಜಾನಪದ ಗೀತೆ ಪ್ರಸ್ತುತಪಡಿಸಿದರು. ದೊಡ್ಡಬಸವ ಗವಾಯಿ, ಅನುಮಯ್ಯ, ಕೆ. ವಸಂತ ಕುಮಾರ್, ಕವಿತಾ ವಸಂತಕುಮಾರ್, ಹುಲುಗಪ್ಪ ಮತ್ತಿತರ ಕಲಾವಿದರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry