ಶನಿವಾರ, ಜೂನ್ 12, 2021
28 °C

ಮನರಂಜನೆ ಉದ್ಯಮ ಶೇ14.2 ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ದೇಶದ ಮಾಧ್ಯಮ ಮತ್ತು ಮನರಂಜನೆ (ಎಂಅಂಡ್‌ಇ) ಉದ್ಯಮ ಕ್ಷೇತ್ರ ಮುಂದಿನ ನಾಲ್ಕು ವರ್ಷಗಳಲ್ಲಿ ಶೇ 14.2ರಷ್ಟು ಪ್ರಗತಿ ದಾಖಲಿಸಲಿದ್ದು, ₨1.78 ಲಕ್ಷ ಕೋಟಿ ವಹಿವಾಟು ಪ್ರಮಾಣಕ್ಕೆ ಬೆಳವಣಿಗೆ ಕಾಣಲಿದೆ ಎಂದು ಭಾರ­ತೀಯ ವಾಣಿ ಜ್ಯೋದ್ಯಮ ಮಹಾಸಂಘ­ಗಳ ಒಕ್ಕೂಟ (ಫಿಕ್ಕಿ) ಮತ್ತು ಕೆಪಿಎಂಜಿ ಸಂಸ್ಥೆ ನಡೆಸಿದ ಜಂಟಿ ಸಮೀಕ್ಷೆಯಿಂದ ತಿಳಿದುಬಂದಿದೆ.

2018ರ ವೇಳೆಗೆ ಭಾರತದ ಮಾಧ್ಯಮ ಮತ್ತು ಮನರಂಜನೆ ಉದ್ಯಮ ಕ್ಷೇತ್ರ ₨1,78,580 ಕೋಟಿ ಪ್ರಮಾಣಕ್ಕೆ ಬೆಳೆ­ಯಲಿದೆ ಎಂದು ‘ಎಂಅಂಡ್‌ಇ’ ಸಮಿತಿ ಅಧ್ಯಕ್ಷ ಮತ್ತು ಸ್ಟಾರ್‌ ಇಂಡಿಯಾ ‘ಸಿಇಒ’ ಉದಯ್‌ ಶಂಕರ್‌ ಹೇಳಿದ್ದಾರೆ.ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು  ಡಾಲರ್‌ ವಿರುದ್ಧ ರೂಪಾಯಿ ಅಪ­ಮೌಲ್ಯದ ನಡುವೆಯೂ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರ ಕಳೆದ ವರ್ಷ ಶೇ 12ರಷ್ಟು (₨91,800 ಕೋಟಿ ವಹಿವಾಟು) ಪ್ರಗತಿ ದಾಖಲಿಸಿತ್ತು.‘ಜಿಡಿಪಿ’ ಕುಸಿತದಿಂದಾಗಿ ಗ್ರಾಹಕ­ರಿಂದ ಬೇಡಿಕೆ ತಗ್ಗಿದೆ. ಇದರ ನಕಾ­ರಾ ತ್ಮಕ ಪರಿಣಾಮ ಜಾಹೀರಾತಿನ ಮೇಲಾ­­ಗಿದೆ. ಜಾಹೀರಾತಿನಿಂದ ಬರುವ ಸರಾ ಸರಿ ವರಮಾನವೂ ತಗ್ಗಿದೆ ಎಂದು ಈ ಅಧ್ಯಯನ ಹೇಳಿದೆ. ಇದೇ ವೇಳೆ 2018ರ ವೇಳೆಗೆ ಆನ್‌ಲೈನ್‌ ಜಾಹೀರಾ­ತಿನಿಂದ ಬರುವ ವರಮಾನ ಶೇ 27.7 ರಷ್ಟು ಹೆಚ್ಚಲಿದೆ ಎಂದೂ ವರದಿ ಗಮನ ಸೆಳೆದಿದೆ.ಆನ್‌ಲೈನ್‌ ಗೇಮಿಂಗ್‌ ಮತ್ತು  ಸಾಮಾ­ಜಿಕ ತಾಣಗಳ ಜನಪ್ರಿ­ಯತೆ ಯಿಂದ ಮೊಬೈಲ್‌ ಫೋನ್‌ ಆಧರಿಸಿದ ಆನ್‌ಲೈನ್‌ ಜಾಹೀರಾ­ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸಾಂಪ್ರಾ­ದಾಯಿಕ ಮಾಧ್ಯ ಮ­ಗಳಿಗಿಂತಲೂ ವೇಗವಾಗಿ ಇದು ಬೆಳೆ ಯುತ್ತಿದೆ ಎಂದು ವರದಿ ವಿವರಿಸಿದೆ.

ದೇಶದ ವಿದ್ಯುನ್ಮಾನ ಮಾಧ್ಯಮ ಉದ್ಯಮದ ವಹಿವಾಟು ಪ್ರಮಾಣ ಸದ್ಯ ₨41,700 ಕೋಟಿಯಷ್ಟಿದೆ. ಇದು 2018ರ ವೇಳೆಗೆ ಶೇ 16ರಷ್ಟು ಪ್ರಗತಿ ಕಾಣಲಿದ್ದು ₨88,500 ಕೋಟಿಗೆ ಏರಿಕೆ ಕಾಣಲಿದೆ ಎಂದೂ ‘ಫಿಕ್ಕಿ’ ಅಂದಾಜು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.