ಮನವರಿಕೆ ಏಕೆ ಸಾಧ್ಯವಿಲ್ಲ?

7

ಮನವರಿಕೆ ಏಕೆ ಸಾಧ್ಯವಿಲ್ಲ?

Published:
Updated:

ಇಡೀ ದೇಶದ ಆಡಳಿತ ಸೂತ್ರ ಹಿಡಿದಿರುವ ಪ್ರಧಾನಿಗೆ ಎಲ್ಲೆಲ್ಲಿ ಎಷ್ಟು ನೀರಿದೆ ಎಂಬ ಅಂಕಿ ಅಂಶ ಗೊತ್ತಿಲ್ಲವೇ? ಇದನ್ನು ಕರ್ನಾಟಕ ಸರ್ಕಾರ ಕೊಡಬೇಕೇ? ಒಂದು ಸದ್ದಾದರೂ ಕೇಳಿ ತಕ್ಷಣ ಪ್ರತಿಕ್ರಿಯಿಸುವ ಸೂಕ್ಷ್ಮಮತಿ ರಾಜ್ಯಪಾಲರಿಗೂ ನಮ್ಮ ಜಲಾಶಯಗಳ ಅಂಕಿ ಅಂಶ ತಿಳಿಯದೇ?ಅವರೇಕೆ ಮೌನವಾಗಿದ್ದಾರೆ?ಉದ್ಯಮಿಗಳಿಗೆ ರೈತರ ಬಗ್ಗೆ ಎಂದೂ ಕಾಳಜಿ ಇಲ್ಲ. ಆದರೆ ಕಾವೇರಿ ಕೇವಲ ರೈತರ ಸಮಸ್ಯೆ ಅಲ್ಲ ಬೆಂಗಳೂರಿನದೂ ಎಂಬುದನ್ನು ಮರೆತಿರುವುದೇ ಆಶ್ಚರ್ಯ. ಪೈರು ಕೈಕೊಟ್ಟರೆ ಆಮದು ಮಾಡಿಕೊಳ್ಳಬಹುದು. ಆದರೆ ಬೆಂಗಳೂರಿಗೆ ನೀರು? ಉದ್ಯಮಿಗಳ ಕಾರ್ಖಾನೆಗಳು ಕಾರ್ಮಿಕರಿಲ್ಲದೆ ನಡೆಯುತ್ತವೆಯೇ?

ಕಾವೇರಿ ಪ್ರಾಧಿಕಾರದ ಅಧ್ಯಕ್ಷರಿಗೆ ಇದನ್ನೆಲ್ಲಾ ಏಕೆ ಮನವರಿಕೆ ಮಾಡಿಕೊಡುತ್ತಿಲ್ಲ?

ಇಂದಿನ ರಾಜಕೀಯ ಪರಿಸ್ಥಿತಿ ಕಾಂಗ್ರೆಸ್ ಅಧಿಕಾರ ಮರಳಿ ಗಳಿಸಲು ಹೇಳಿ ಮಾಡಿದಂತಿತ್ತು.

ಆದರೆ ಕಾವೇರಿ ಪರಿಹಾರ ಅವರ ಕೈಲಿ ಇದ್ದರೂ ಹೈಕಮಾಂಡ್ ಆಜ್ಞಾಪಾಲಕರಾಗಿ ಕರ್ನಾಟಕ ಕಾಂಗ್ರೆಸ್ ಎದ್ದು ಕಾಣುವಂತೆ ಜನಹಿತ ಮರೆತು ತಿರಸ್ಕಾರಕ್ಕೆ ಒಳಗಾಗಬೇಕಿದೆ. ಇನ್ನೇನು ಎಲ್ಲ ನೀರು ಹರಿದು ಕಾವೇರಿ ಖಾಲಿಯಾಗಿದೆ.ಈಗಲಾದರೂ ನೀರು ಬಿಡುವುದು ಬೇಡ ಎಂದು ಶಾಸಕರೂ ಸಂಸದರೂ ಹೇಳಿದರೆ ಖಂಡಿತ ತಮಿಳುನಾಡು ತಕರಾರು ಮಾಡಲಾರದು. ಪ್ರಧಾನಿ ಖಂಡಿತ ಆದೇಶ ರದ್ದು ಮಾಡಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry