ಭಾನುವಾರ, ನವೆಂಬರ್ 17, 2019
29 °C

ಮನವೊಲಿಕೆ ಯತ್ನ ವಿಫಲ: ಹಾಲಾಡಿ ಇಂದು ರಾಜೀನಾಮೆ

Published:
Updated:

ಸಿದ್ದಾಪುರ: ಸಚಿವ ಸ್ಥಾನ ವಂಚಿತರಾಗಿ ಅಸಮಧಾನಗೊಂಡಿರುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನವೊಲಿಕೆಗೆ ಸಚಿವ ಸುರೇಶ್ ಕುಮಾರ್ ಸೋಮವಾರ ನಡೆಸಿದ ಪ್ರಯತ್ನ ವಿಫಲವಾಗಿದೆ.

ಸುರೇಶ್ ಕುಮಾರ್ ಅವರು ರಾಜ್ಯ ಮೂರನೇ ಹಣಕಾಸು ಅನುಷ್ಠಾನ ಸಮಿತಿ ಕಾರ್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿ.ಸುನಿಲ್‌ಕುಮಾರ್ ಅವರೊಂದಿಗೆ ಹಾಲಾಡಿ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಅದರೆ ಫಲಪ್ರದವಾಗಲಿಲ್ಲ.

ನಿರ್ಧಾರ ಅಚಲ: ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ `ನನ್ನ ನಿರ್ಧಾರ ಅಚಲವಾಗಿದ್ದು, ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ನಾಳೆ ಬೆಂಗಳೂರಿಗೆ ತೆರಳಿ ಸ್ಪೀಕರ್‌ಗೆ ರಾಜೀನಾಮೆ ನೀಡುತ್ತೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದರು.

ಪ್ರತಿಕ್ರಿಯಿಸಿ (+)