ಮನಸು ಮುದಗೊಳಿಸುವ ಶಕ್ತಿ ಸಂಗೀತಕ್ಕಿದೆ

7

ಮನಸು ಮುದಗೊಳಿಸುವ ಶಕ್ತಿ ಸಂಗೀತಕ್ಕಿದೆ

Published:
Updated:

ಅಳ್ನಾವರ: ಮನಸ್ಸನ್ನು ಪ್ರಪುಲ್ಲ ಗೊಳಿಸುವ ಅಗಾಧ ಶಕ್ತಿ ಸಂಗೀತಕ್ಕೆ ಇದೆ ಎಂದು ಧಾರವಾಡ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ  ಪ್ರಾಚಾರ್ಯ ಡಾ.ಎಸ್.ಮೋಹನ ಕುಮಾರ ಅಭಿಪ್ರಾಯಪಟ್ಟರು.ಇಲ್ಲಿಗೆ ಸಮೀಪದ ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ಈಚೆಗೆ ನಡೆದ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಾಸ್ತ್ರೀಯ ಸಂಗೀತಕ್ಕೆ ಆಗಾಧವಾದ ಶಕ್ತಿ ಹೊಂದಿದೆ  ಎನ್ನುವುದನ್ನು  ಅರಿತ ಕೆನಡಾ ಮೂಲದ ಪಿ. ಮ್ಯಾಥ್ಯೂ  ಕಲಕೇರಿಯಲ್ಲಿ ಸಂಗೀತ ಶಾಲೆ ತೆರೆದು ನಮ್ಮ ಪರಂಪರೆಯನ್ನು ರಕ್ಷಿಸಲು ಶ್ರಮಿಸುತ್ತಿರುವುದು  ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪ ವಿಭಾಗಾಧಿಕಾರಿ ಶಿವಾನಂದ ಕಾಪಸೆ, ಅಜಯ್ ಶುಕ್ಲಾ ಮಾತನಾಡಿ ದರು.ಮ್ಯಾಥ್ಯೂ ಪೂರ್ಟಿನ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಹೈದರಾಬಾದ ಮೂಲದ ಅಪ್ಪಾರಾವ, ಆರ್. ಕೆ. ಪ್ರಸಾದ, ಡಿಡಿಪಿಐ ಕೆ. ಆನಂದ, ಎ.ಎ. ಖಾಜಿ, ಪ್ರಕಾಶ ಕಾಮತ, ಎಸ್.ಎಸ್. ಪಿರಜಾದೆ, ಅಡಮ್ ವುಡ್ಸ್, ಗ್ರಾ.ಪಂ. ಅಧ್ಯಕ್ಷೆ ಕಮಲವ್ವ ಪಾಗೋಜಿ, ಮಾರುತಿ ಬಾಂಗಡಿ, ಏಗೆತಾ ಕೊಟಿಯರ್, ಚರಣ, ಎಂ.ಎಸ್. ವಾಲೀಕಾರ, ಕಲ್ಲಪ್ಪ ಬಾಂಗಡಿ ಹಾಜರಿದ್ದರು.`ಗುರು ಹಮಾರೆ ಮನ ಮಂದಿರಮೆ, ಗುರು ಹಮಾರೆ ಪ್ಯಾರಾ..~ ಹಾಡಿ ನೊಂದಿಗೆ ಕಾರ್ಯಕ್ರಮ ಆರಂಭವಾ ಯಿತು. ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳು ಗಮನ ಸೆಳೆದವು.  ಶಿವ ಕುಮಾರ ಲಮಾಣಿ ಸ್ವಾಗತಿಸಿದರು. ದಯಾನಂದ ಪಿರಗಾರ ಪರಿಚಯಿ ಸಿದರು. ಪ್ರಶಾಂತ ಹಾರೊಗೇರಿಮಠ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry