ಬುಧವಾರ, ಮೇ 18, 2022
25 °C

ಮನಸ್ತಾಪದಿಂದ ಅಭಿವೃದ್ಧಿಗೆ ಹಿನ್ನೆಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಪ್ರತಿಪಕ್ಷಗಳ ಪೂರ್ಣ ಸಹಕಾರವಿದ್ದರೂ ನಗರದ ಸೂಪರ್ ಮಾರ್ಕೆಟ್ ಅಭಿವೃದ್ಧಿ ವಿಳಂಬವಾಗಲು ಶಾಸಕ ಚಂದ್ರಕಾಂತ ಬೆಲ್ಲದ ಮತ್ತು ಸಚಿವ ಜಗದೀಶ ಶೆಟ್ಟರ ನಡುವಣ ತಿಕ್ಕಾಟವೇ ಕಾರಣ~ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ ಚಿಂಚೋರೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.`ಶಾಸಕ ಬೆಲ್ಲದ ಅವರಿಗೆ ಧಾರವಾಡದ ಅಭಿವೃದ್ಧಿಗಿಂತಲೂ ಸಚಿವ ಸ್ಥಾನದ ಮೇಲೆ ಕಣ್ಣಿದೆ. ಸೂಪರ್ ಮಾರ್ಕೆಟ್ ಪ್ರಸ್ತುತ ಬೆಳವಣಿಗೆ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ಅವರು, ಸಂಪುಟದ ಅನುಮೋದನೆ ಸಿಗಲಿದೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ~ ಎಂದು ಟೀಕಿಸಿದರು.`ಬಿಜೆಪಿ ಸರಕಾರ ಸೂಪರ್ ಮಾರ್ಕೆಟ್ ಅನ್ನು ಸಂಪೂರ್ಣ ಖಾಸಗೀಕರಣಗೊಳಿಸಲು ಹೊರಟಿದೆ. ರೂ. 83 ಕೋಟಿಗೆ 30 ವರ್ಷಗಳಿಗೆ ಗುತ್ತಿಗೆ ನೀಡುವ ವಿಚಾರವನ್ನು ಸರಕಾರ ಹೊಂದಿದೆ. ಖಾಸಗಿ ಸಹಭಾಗಿತ್ವದ ಯೋಜನೆ (ಪಿಪಿಪಿ)ಗೆ ತಮ್ಮ ಒಪ್ಪಿಗೆ ಇದೆ. ಸ್ಥಳೀಯ ಶಾಸಕ ಬೆಲ್ಲದ ಈ ಕುರಿತು ಆಸಕ್ತಿ ವಹಿಸುತ್ತಿಲ್ಲ. ಈ ಕುರಿತು ಬಹಿರಂಗ ಚರ್ಚೆಗೂ ಸಿದ್ಧ~ ಎಂದು ಅವರು  ತಿಳಿಸಿದರು.`ಸೂಪರ್ ಮಾರ್ಕೆಟ್ ಪೂರ್ಣ ಅಭಿವೃದ್ಧಿಯಾಗಲು ಸಾಕಷ್ಟು ಸಮಯ ಬೇಕು. ಅಲ್ಲಿಯವರೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಪ್ರಯತ್ನವನ್ನಾದರೂ ಪಾಲಿಕೆ ಮಾಡಲಿ~ ಎಂದು ಅವರು ಒತ್ತಾಯಿಸಿದರು.ಮುಂದಿನ ಸಾಮಾನ್ಯ ಸಭೆಯ ಒಳಗಾಗಿ ಸೂಪರ್ ಮಾರ್ಕೆಟ್ ಅಭಿವೃದ್ಧಿ ಕುರಿತು ಸ್ಪಷ್ಟ ನಿರ್ಧಾರ    ಕೈಗೊಳ್ಳದೆ ಇದ್ದಲ್ಲಿ ನಗರಾಭಿವದ್ಧಿ ಸಚಿವ ಸುರೇಶಕುಮಾರ ನಿವಾಸ ಎದುರು ಕಾಂಗ್ರೆಸ್ ಪ್ರತಿಭಟನೆ           ನಡೆಸುತ್ತೇವೆ. ಪ್ರತಿಭಟನೆಯಲ್ಲಿ ಎಲ್ಲ ಪಾಲಿಕೆ ಸದಸ್ಯರು, ಸಾಹಿತಿಗಳು, ಗಣ್ಯ ನಾಗರಿಕರು ಪಾಲ್ಗೊಳ್ಳುವರು~ ಎಂದು ಅವರು ಪ್ರಕಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.