ಮನಸ್ಸು ಓದುವ ಯಂತ್ರ ಮಾರುಕಟ್ಟೆಗೆ..?

7

ಮನಸ್ಸು ಓದುವ ಯಂತ್ರ ಮಾರುಕಟ್ಟೆಗೆ..?

Published:
Updated:

ಲಂಡನ್ (ಪಿಟಿಐ):  ಆಕೆಯ ಮನದಲ್ಲಿ ಏನಿದೆ..? ಹೂ ಅನ್ನುತ್ತಾಳಾ..? ಊಹೂಂ ಅನ್ನುತ್ತಾಳಾ..? ಯುವ ಪ್ರೇಮಿಗಳನ್ನು ನಿರಂತರ ಕಾಡುವ ಪ್ರಶ್ನೆ ಇದು.ಆದರೆ, ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಈ ಗೊಂದಲಗಳಿಗೆಲ್ಲ ತೆರೆ ಎಳೆಯಲು ಹೊರಟಿದೆ. ಬೇರೆಯವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಓದುವಂತಹ ಯಂತ್ರ ರೂಪಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರಾಥಮಿಕ ಹಂತದ ಸಂಶೋಧನೆ ನಡೆಯುತ್ತಿದೆ.ಸದ್ಯಕ್ಕೆ ಕಾಲ್ಪನಿಕ ವೈಜ್ಞಾನಿಕ ಕಾದಂಬರಿಗಳ ರೋಚಕ ಅಧ್ಯಾಯದಂತೆ ಕಾಣುವ ಈ `ಮನಸು ಓದುವ ಯಂತ್ರ~ ಕೆಲ ವರ್ಷಗಳ ನಂತರ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದೂ ಈ ವಿಜ್ಞಾನಿಗಳು ಹೇಳುತ್ತಾರೆ.ನಾವು ಮಾತನಾಡುವಾಗ, ಬೇರೆಯವರು ಮಾತನಾಡುವುದನ್ನು ಕೇಳುವಾಗ ಮಿದುಳಿನಲ್ಲಿ ಮೂಡುವ ಅಲೆಗಳ ಸಂಕೇತವನ್ನು ಬಿಡಿಸಿ ಏನು ಮಾತನಾಡುತ್ತಿದ್ದೇವೆ, ಕೇಳುತ್ತಿದ್ದೇವೆ ಎಂಬುದನ್ನು ಪತ್ತೆ ಹಚ್ಚಬಹುದು ಎನ್ನುತ್ತದೆ ಈ ಸಂಶೋಧಕರ ತಂಡ.ಈ ಪ್ರಯೋಗದಲ್ಲಿ ಯಶಸ್ವಿಯಾಗಿ, ಯಂತ್ರ ರೂಪಿಸಿದಲ್ಲಿ ಯಾವುದೋ ಕಾರಣದಿಂದ ಮಾತು ಕಳೆದುಕೊಂಡ ಕೋಟ್ಯಂತರ ಜನರಿಗೆ ಲಾಭವಾಗಲಿದೆ. ಅವರ ಮಿದುಳಿನಲ್ಲಿ ನಡೆಯುವ ಚಟುವಟಿಕೆಯಿಂದ ಅವರು ಏನು ಹೇಳಲು ಬಯಸುತ್ತಿದ್ದಾರೆ ಎಂಬುದನ್ನು ಅರಿಯಬಹುದಾಗಿದೆ ಎಂದು ಸಂಶೋಧಕರ ತಂಡದಲ್ಲಿ ಒಬ್ಬರಾದ ಕ್ಯಾಲಿಫೋರ್ನಿಯಾ ವಿವಿ ಪ್ರೊ. ರಾಬರ್ಟ್ ನೈಟ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry