ಮನಿಲಾ: ಅಗ್ನಿ ದುರಂತ, 8 ಬಲಿ

7

ಮನಿಲಾ: ಅಗ್ನಿ ದುರಂತ, 8 ಬಲಿ

Published:
Updated:

ಮನಿಲಾ (ಎಎಫ್‌ಪಿ): ಕ್ರಿಸ್‌ಮಸ್ ದಿನವಾದ ಮಂಗಳವಾರ ಈ ನಗರದಲ್ಲಿ ಸಂಭವಿಸಿದ ಎರಡು ಅಗ್ನಿ ದುರಂತ ಪ್ರಕರಣಗಳಿಂದಾಗಿ 8 ಜನ ಸಾವಿಗೀಡಾಗಿ ಸಾವಿರಾರು ಜನ ಮನೆ, ಮಠ ಕಳೆದುಕೊಂಡಿದ್ದಾರೆ.ಅಪಾರ್ಟ್‌ಮೆಂಟ್ ಒಂದರಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಅದಕ್ಕೆ ಹೊಂದಿಕೊಂಡ ಕೊಳೆಗೇರಿ ಪ್ರದೇಶಕ್ಕೆ ವ್ಯಾಪಿಸಿ ಈ ದುರಂತ ಸಂಭವಿಸಿತು.

ಕ್ರಿಸ್‌ಮಸ್ ಪಾರ್ಟಿಗಳ ನಿಮಿತ್ತ ಈ ಸಂದರ್ಭದಲ್ಲಿ ಇಲ್ಲಿ ಕೌಟುಂಬಿಕ ಕೂಟಗಳು ಹೆಚ್ಚಾಗಿ ನಡೆಯುತ್ತವೆ. ಇದರಿಂದಾಗಿ ವಿದ್ಯುತ್ ಬಳಕೆ ಹೆಚ್ಚಿ ಸರ್ಕೀಟ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗೆ ವಿದ್ಯುತ್ ಬಳಕೆ ಒತ್ತಡ ಅಧಿಕವಾದಾಗ ಸಮಸ್ಯೆಯಾಗಿ ಅಪಾರ್ಟ್‌ಮೆಂಟ್‌ಗೆ ಬೆಂಕಿ ಹೊತ್ತಿಕೊಂಡಿರಬೇಕು ಎಂದು ಅಂದಾಜಿಸಲಾಗಿದೆ. ಆದರೆ, ತನಿಖೆಯ ನಂತರವಷ್ಟೇ ಸ್ಪಷ್ಟವಾದ ಕಾರಣ ಗೊತ್ತಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry