ಸೋಮವಾರ, ಸೆಪ್ಟೆಂಬರ್ 16, 2019
26 °C

ಮನುಶ್ರೀ ರಾಷ್ಟ್ರೀಯ ದತ್ತಿ ಪ್ರಶಸ್ತಿ ಪ್ರದಾನ

Published:
Updated:

ಗುಲ್ಬರ್ಗ: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅವರಿಂದ ನೀಡುವ ಅತ್ತಿಮಬ್ಬೆ ಪ್ರತಿಷ್ಠಾನ `ಮನುಶ್ರಿ ರಾಷ್ಟ್ರೀಯ ದತ್ತಿ ಪ್ರಶಸ್ತಿ~ಯನ್ನು ಡಾ. ಸರಸ್ವತಿ ಚಿಮ್ಮಲಗಿ ಹಾಗೂ ಡಾ. ಪ್ರಭುಶಂಕರಗೆ ಅವರಿಗೆ ಪ್ರದಾನ ಮಾಡಲಾಯಿತು.ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ಡಾ. ಕಮಲಾ ಹಂಪನ ಹಿರಿಯ ಸಾಹಿತಿಗಳಿಬ್ಬರನ್ನು ಸನ್ಮಾನಿಸಿ ಪ್ರಶಸ್ತಿ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ, ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಡಾ. ವಾರದಾ ಶ್ರಿನಿವಾಸ, ರಾಮಣ್ಣ ಕೋಡಿಹಳ್ಳಿ, ಮನೋಹರಿ ಪ್ರಾರ್ಥಸಾರಥಿ ಮತ್ತಿತರರು ಇದ್ದರು.

 

Post Comments (+)