ಶುಕ್ರವಾರ, ಮೇ 7, 2021
24 °C

`ಮನುಷ್ಯತ್ವ ರೂಪಿಸುವ ಸಾಹಿತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: `ಸಾಹಿತ್ಯವನ್ನು ಬಿಟ್ಟು ನಾವು ಒಳ್ಳೆ ಮನುಷ್ಯರಾಗಲು ಸಾಧ್ಯ ವಿಲ್ಲ. ನಮ್ಮ ಮನುಷ್ಯ ಗುಣಗಳನ್ನು ಬದಲಾಯಿಸಲು ಸಾಹಿತ್ಯ ಪೂರಕ ವಾಗಿದೆ' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.ಸೋಮವಾರ ತೀರ್ಥಹಳ್ಳಿಯಲ್ಲಿ ನಡೆದ 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು.`ಒಬ್ಬ ಓದುಗ ಸಮಾಜಕ್ಕೆ ಬಂದಾಗ ಅವನಿಂದ ನುರಾರು ಜನರನ್ನು ಬದಲಾಯಿಸುವ ಶಕ್ತಿ ಬರುತ್ತದೆ. ಸಾಹಿತ್ಯಕ್ಕೆ ಅಗಾಧವಾದ ಶಕ್ತಿ ಇದೆ. ಅದನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ' ಎಂದರು.`ಸಮಾಜವನ್ನು ಕೇವಲ ಒಂದು ಸರ್ಕಾರ, ಮುಖ್ಯಮಂತ್ರಿ ಹಾಗೂ ಮಂತ್ರಿಗಳಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಮಾಜದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ. ನಾನು ಕೋಣಂದೂರು ಲಿಂಗಪ್ಪ, ಜಾರ್ಜ್ ಫರ್ನಾಂಡೀಸ್ ಭಾಷಣವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಅದಕ್ಕೆ ಸಾಹಿತ್ಯ ಕಾರಣ. ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು' ಎಂದರು.`ನಾನು ಬಹಳ ನಿರೀಕ್ಷೆ ಭರವಸೆ ಗಳನ್ನು ಇಟ್ಟುಕೊಂಡಿಲ್ಲ. ಪ್ರಯತ್ನ, ಕರ್ತವ್ಯದಿಂದ ವಿಮುಖ ನಾಗುವುದಿಲ್ಲ.  ಸಾಧ್ಯವಾದ ಮಟ್ಟಿಗೆ ಈ ಕ್ಷೇತ್ರದ ಗೌರವ, ಘನತೆ ಉಳಿಸಲು ಏನು ಮಾಡಲು ಸಾಧ್ಯವೋ ಅವೆಲ್ಲವನ್ನೂ ಪ್ರಾಮಾಣಿಕವಾಗಿ ಮಾಡುತ್ತೇನೆ' ಎಂದು ನುಡಿದರು.ಭಾಷಾ ನೀತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಜನ ಸಮುದಾಯ ಹಾಗೂ ವಿಚಾರ ವಾದಿಗಳನ್ನು ಜೊತೆಯಲ್ಲಿ ಇಟ್ಟು ಕೊಂಡು ಹೋಗಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ತಕ್ಷಣಕ್ಕೆ ಪವಾಡ ಮಾಡಲು ಆಗುವುದಿಲ್ಲ. ಆದರೆ, ಏನೇನು ಬದಲಾವಣೆ ತರಬೇಕೋ ಆ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದರು.ಸಾಕಷ್ಟು ಜನ ಶಿಕ್ಷಕರು ತಮ್ಮ ವೈಯುಕ್ತಿಕ ಸಮಸ್ಯೆಗಳನ್ನು ಹೇಳಲು ಬರುತ್ತಾರೆ. ಆದರೆ, ಗುಣಾತ್ಮಕ ಶಿಕ್ಷಣ ನೀಡಲು ಏನು ಮಾಡಬೇಕು ಎಂಬು ದನ್ನು ತಿಳಿಸುತ್ತಿಲ್ಲ. ಇದು ನೋವಿನ ಸಂಗತಿ ಎಂದರು.  ಪೊಲೀಸರ ಬೆಂಗಾವಲು ನನ್ನನ್ನು ಜನರಿಂದ ದೂರ ಮಾಡುವಂತೆ ಮಾಡುತ್ತಿದೆ ಎಂದು ಭಾಸವಾಗುತ್ತಿದೆ. ನಕ್ಸಲ್ ಪೀಡಿತ ಪ್ರದೇಶದ ಕಾರಣಕ್ಕೆ ನನಗೆ ರಕ್ಷಣೆ ನೀಡಲಾಗಿದೆ. ಇದು ನನಗೆ ಸಾಕಷ್ಟು ಕಿರಿಕಿರಿಗೆ ಕಾರಣವಾಗುತ್ತಿದೆ ಎಂದು ಕಿಮ್ಮನೆ ಹೇಳಿದರು.ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಕೋಣಂದುರು ಲಿಂಗಪ್ಪ, ಡಾ.ಕಾಳೇಗೌಡ ನಾಗವಾರ, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ತಾಲ್ಲೂಕು ಕಸಾಪ ಅಧ್ಯಕ್ಷ ನೆಂಪೆ ದೇವರಾಜ್, ಡಾ.ಜೆ.ಕೆ.ರಮೇಶ್, ಡಾ.ರಾಜೇಂದ್ರ ಬುರಡಿಕಟ್ಟಿ, ಮಾಜಿ ಶಾಸಕ ಪಟಮಕ್ಕಿ ರತ್ನಾಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.