ಶನಿವಾರ, ಫೆಬ್ರವರಿ 27, 2021
27 °C
ಮೂಡಿಗೆರೆ : 7 ನೇ ವರ್ಷದ ತುಳು ವೈಭವ

ಮನುಷ್ಯನಿಗೆ ಭಾಷೆಯ ಮೇಲೆ ಅಭಿಮಾನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನುಷ್ಯನಿಗೆ ಭಾಷೆಯ ಮೇಲೆ ಅಭಿಮಾನ ಅಗತ್ಯ

ಮೂಡಿಗೆರೆ:  ಮಾನವನಿಗೆ ತನ್ನ ಮಾತೃಭಾಷೆಯ ಮೇಲೆ ಅಭಿಮಾನ ವಿರಬೇಕು ಎಂದು ಉದ್ಯಮಿ ಕಣಚೂರು ಮೋನು ಅಭಿಪ್ರಾಯಪಟ್ಟರು.ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಶುಕ್ರವಾರ ತಾಲ್ಲೂಕು ತುಳುಕೂಟದ ವತಿಯಿಂದ ನಡೆದ 7ನೇ ವರ್ಷದ ತುಳು ವೈಭವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿ ದರು. ಭಾಷೆ ಮಾನವನನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಒಂಟಿ ಎಂಬ ಭಾವನೆ ಮೂಡಿದಾಗ, ತನ್ನ ಮಾತೃ ಭಾಷೆಯನ್ನಾಡುವ ಬೇರೊಬ್ಬ ವ್ಯಕ್ತಿ ಸಿಕ್ಕಿದರೆ ಸ್ವರ್ಗ ಸಿಕ್ಕಷ್ಟೇ ಸಂತೋಷ ವಾಗುತ್ತದೆ ಎಂದು ಉದಾಹರಣೆ ಯೊಂದಿಗೆ ಹೇಳಿದರು.ಇಡೀ ಬಾಲ್ಯವನ್ನು ಕಳೆದ ತಾಲ್ಲೂಕಿನ ಕಣಚೂರು ಗ್ರಾಮವನ್ನು ತನ್ನ ಹೆಸರಿನೊಂದಿಗೆ ಉಚ್ಚರಿಸುವಾಗ ಹೆಮ್ಮೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್ ಮಾತನಾಡಿ, ಮಲೆನಾಡಿನ ಅಭಿವೃದ್ಧಿಯಲ್ಲಿ ತುಳು ಭಾಷಿಕರ ಕೊಡುಗೆಯಿದ್ದು, ತುಳು ಭಾಷಿಕರು ಇಟ್ಟ ಗುರಿಯನ್ನು ಛಲಬಿಡದೇ ಸಾಧಿಸುವ ಮನೋಭಾವ ಹೊಂದಿರುತ್ತಾರೆ. ತುಳು ಕೂಟದ ಚಟುವಟಿಕೆಗಳು ಕೇವಲ ತುಳು ವೈಭವಕ್ಕೆ ಮಾತ್ರ ಸೀಮಿತವಾಗದೇ, ವರ್ಷಪೂರ್ತಿ ಸಾಂಸ್ಕೃತಿಕ ಚಟುವಟಿಕೆ ಗಳನ್ನು ನಡೆಸಿ, ತುಳು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ರವಾನಿಸಬೇಕು ಎಂದರು.ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ತುಳು ಭಾಷೆಗೆ ತನ್ನದೇ ಆದ ಇತಿಹಾಸವಿದ್ದು, ಐಕ್ಯತೆಗೆ ತುಳು ಭಾಷಿಕರು ಇಡೀ ದೇಶಕ್ಕೆ ಮಾದರಿ ಯಾಗಿದ್ದಾರೆ. ಭಾಷೆ, ನೆಲ ವಿಚಾರದಲ್ಲಿ ತುಳು ಭಾಷಿಕರ ನಡೆ ಅನುಕರಣೀಯ ಎಂದರು.ತುಳುಕೂಟದ ಅಧ್ಯಕ್ಷ ರವಿಕುಮಾರ್‌ ಮಾತನಾಡಿ, ತುಳು ಭಾಷೆಗೆ ಯಾವುದೇ ಜಾತಿಮತಗಳ ತಾರತಮ್ಯತೆಯಿಲ್ಲ, ಕೂಟದ ಹೆಸರಿನಲ್ಲಿ ಎಲ್ಲಾ ವರ್ಗದ ಜನಾಂಗದವರು ಒಂದೆಡೆ ಸೇರುವುದೇ ದೊಡ್ಡ ಹರ್ಷದಾಯಕ ಕಾರ್ಯಕ್ರಮ ವಾಗಿದೆ. ಇಂತಹ ಕಾರ್ಯಕ್ರಮಗಳು ವರ್ಷಪೂರ್ತಿ ನಡೆದರೆ, ತುಳು ಭಾಷಿಕರ ಬಾಂಧವ್ಯ ವೃದ್ಧಿ ಇನ್ನಷ್ಟು ಸಾಧ್ಯ ವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸ್ಮಿತಾಭಾಸ್ಕರ್‌, ನವೀನ್ ಹಾಗೂ ಸುರೇಶ್‌ಚಂದ್ರದತ್ತ ಅವರನ್ನು ಸನ್ಮಾನಿಸಲಾಯಿತು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಣಜೂರು ಸುಬ್ರಾಯಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆರ್‌. ಪಾರ್ವತಮ್ಮ ಕಾಳಯ್ಯ, ಮಂಗಳೂರಿನ ವೈಟ್‌ಡೌಸ್‌ ಸಂಸ್ಥೆಯ ಸ್ಥಾಪಕಿ ಕೋರಿನ್‌ ಅಂಟೋ ನಿಯಟ್‌ ರಸ್ಕಿನಾ ಮಾತನಾಡಿ ದರು. ತುಳುಕೂಟದ ಕಾರ್ಯದರ್ಶಿ ವಸಂತ ಪೂಜಾರಿ, ಪದಾಧಿಕಾರಿಗಳಾದ ವಿಶ್ವ ನಾಥರೈ, ಡಾ. ರಾಮಚರಣ ಅಡ್ಯಂ ತಾಯ, ಅತುಲ್‌ರಾವ್‌, ಅಶೋಕ್‌ ಶೆಟ್ಟಿ  ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.