ಗುರುವಾರ , ಅಕ್ಟೋಬರ್ 17, 2019
21 °C

ಮನುಷ್ಯನ ನೆಮ್ಮದಿಗೆ ಸಂಗೀತ ಪೂರಕ

Published:
Updated:

ಶಿವಮೊಗ್ಗ: ಮನುಷ್ಯನ ಬದುಕಿಗೆ ನೆಮ್ಮದಿ ಬೇಕು. ಆದರೆ ಅದು ಹಣ, ಅಧಿಕಾರ, ಸಂಪತ್ತಿನಲ್ಲಿಲ್ಲ. ಬದಲಿಗೆ ಸಂಗೀತ, ಸಾಹಿತ್ಯದಲ್ಲಿದೆ ಎಂದು ಆನಂದಪುರ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಭಾನುವಾರ ಗುರುಕೃಪ ಗಾನಮಂದಿರದ 8ನೇ  ವರ್ಷದ ಸಂಗೀತ ಹಬ್ಬ  ಉದ್ಘಾಟಿಸಿ ಮಾತನಾಡಿದರು.ಕುವೆಂಪು ವಿ.ವಿ. ಸಿಂಡಿಕೇಟ್ ಸದಸ್ಯೆ ಇ. ಪ್ರೇಮಾ ಮಾತನಾಡಿ, ಸ್ವಸ್ಥ ಸಮಾಜ ಮತ್ತು ಕುಟುಂಬಕ್ಕೆ ಸಂಗೀತ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ವ್ಯವಹಾರಿಕ ಬದುಕಿನಲ್ಲಿ ಸಂಗೀತ ಮನುಷ್ಯನಿಗೆ ಸೌಜನ್ಯ, ಸಂಸ್ಕಾರಗಳನ್ನು ಕಲಿಸುತ್ತದೆ ಎಂದರು.ಕಲಾವಿದರಾದ ಹೂಳಿಯಪ್ಪ ಗವಾಯಿ, ಅರುಣ ಹಂಪಿಹೋಳಿ, ಕೆ. ರಂಗಪ್ಪನಾಯಕ, ಕ್ಯಾಸಿಯೊ ಆರ್. ಸಿದ್ದಪ್ಪ, ಮಲ್ಲಪ್ಪ ಪರಪ್ಪ, ಅಡ್ರಕಟ್ಟಿ ಅವರನ್ನು ಸನ್ಮಾನಿಸಲಾಯಿತು.ಕಲ್ಯಾಣ ಮಂದಿರದ ಕೋಶಾಧಿಕಾರಿ ಎಚ್.ಆರ್. ಉಮೇಶ್ ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಗುರುಕುಲ ಗಾನಮಂದಿರದ ಪ್ರಾಂಶುಪಾಲ ಉಸ್ತಾದ್ ಹುಮಾಯೂನ್ ಹರ‌್ಲಾಪುರ್ ಸ್ವಾಗತಿಸಿದರು. ಕಿರುವಾಕರ್ ನಿರೂಪಿಸಿದರು. ಚಂದ್ರಶೇಖರ್ ವಂದಿಸಿದರು.

Post Comments (+)