ಗುರುವಾರ , ಜೂನ್ 24, 2021
24 °C

ಮನುಷ್ಯನ ಬದುಕಿನ ಮೇಲೆ ಒತ್ತಡ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಬದಲಾದ ಜೀವನ ಶೈಲಿಯಿಂದ ಮನುಷ್ಯನ ಬದುಕಿನ ಮೇಲೆ ಒತ್ತಡ ಹೆಚ್ಚುತ್ತಿದ್ದು, ಈ ಕಾರಣಕ್ಕೆ ಹೃದಯ ಸಂಬಂಧಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ರೆಡ್‌ಕ್ರಾಸ್ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಟಿ. ತಿಮ್ಮಪ್ಪ ಹೇಳಿದರು.ಇಲ್ಲಿನ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಸಾಗರ್ ಹಾಸ್ಪಿಟಲ್, ಸರ್ಕಾರಿ ನೌಕರರ ಸಂಘ, ಪ್ರಾಂತ್ಯ ಹೋಟೆಲ್ ಮಾಲೀಕರ ಸಂಘ ಆಶ್ರಯದಲ್ಲಿ ಬುಧವಾರ ನಡೆದ ಹೃದಯರೋಗ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಾ.ಸ. ನಂಜುಂಡಸ್ವಾಮಿ ಮಾತನಾಡಿ, ಇಂತಹ ಶಿಬಿರಗಳು ತಾಲ್ಲೂಕು ಕೇಂದ್ರಗಳ ಜತೆಗೂ ಗ್ರಾಮೀಣ ಪ್ರದೇಶದಲ್ಲೂ ನಡೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ತಾಲ್ಲೂಕು ಕೇಂದ್ರದಿಂದ ದೂರದಲ್ಲಿರುವ ಕೋಗಾರ್‌ನಲ್ಲಿ ಶಿಬಿರ ಏರ್ಪಡಿಸಲಾಗುವುದು ಎಂದು ತಿಳಿಸಿದರು.ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆ.ಎಸ್. ಮೋಹನ್, ಡಾ.ಬಿ.ಜಿ. ಸಂಗಂ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮುರಳೀಧರ ಹತ್ವಾರ್, ಬೆಂಗಳೂರು ಸಾಗರ್ ಹಾಸ್ಪಿಟಲ್‌ನ ತಜ್ಞ ವೈದ್ಯರಾದ ಡಾ.ರಾಕೇಶ್, ಡಾ.ಲಕ್ಷ್ಮೀಕಾಂತ್, ರಮೇಶ್‌ಕುಮಾರ್ ಇನ್ನಿತರರು ಹಾಜರಿದ್ದರು. ಜಯಮ್ಮ ಪ್ರಾರ್ಥಿಸಿದರು. ಬಿ.ಎಸ್. ಪ್ರಭಾಕರ್ ಸ್ವಾಗತಿಸಿದರು. ಎಸ್.ಎಚ್. ಶಿರಗುಂಬಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.