ಮನುಷ್ಯನ ಸ್ವಾರ್ಥಕ್ಕೆ ಜೀವವೈವಿಧ್ಯ ಬಲಿ

7

ಮನುಷ್ಯನ ಸ್ವಾರ್ಥಕ್ಕೆ ಜೀವವೈವಿಧ್ಯ ಬಲಿ

Published:
Updated:

ನರಸಿಂಹರಾಜಪುರ: ಮನುಷ್ಯನ ಸ್ವಾರ್ಥಕ್ಕೆ ಜೀವವೈವಿಧ್ಯತೆಗಳು ವಿನಾ ಶದ ಅಂಚಿಗೆ ತಲುಪಿವೆ ಎಂದು ಕುವೆಂಪು ವಿಶ್ವವಿದ್ಯಾಲಯದ ಅನ್ವ ಯಿಕ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾ ಪಕ ಪ್ರೊ.ಬಿ.ಹೊಸಟ್ಟಿ ತಿಳಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕುವೆಂಪು ವಿಶ್ವವಿದ್ಯಾಲಯದ ಆಶ್ರಯ ದಲ್ಲಿ ಅರಿವು ವಿಸ್ತರಣ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿದರು.ಅಲೆಮಾರಿ ಸಮುದಾಯಗಳ ಬಗ್ಗೆ ಉಪನ್ಯಾಸ ನೀಡಿದ ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಗುರು ಲಿಂಗಯ್ಯ, ಅಲೆಮಾರಿ ಜನಾಂಗದವರು  ಸಂಶೋಧನೆ, ಶಿಕ್ಷಣ ಮತ್ತು ಸರ್ಕಾರದ ತಪ್ಪು ನೀತಿಯಿಂದಾಗಿ ನಿರ್ಲಕ್ಷ್ಯಕ್ಕೊಳಗಾಗಿವೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾ ಲಯದ ಪ್ರಸಾರಾಂಗದ ಉಪನಿರ್ದೇಶಕ ಡಾ.ಶಿವಾನಂದ ಕೆಳಗಿನಮನಿ ಪ್ರಸಾರಾಂಗ ವಿಭಾಗದ ಬೋಧನೆ ಮತ್ತು ಸಂಶೋದನೆ  ಕೇವಲ ವಿಶ್ವವಿದ್ಯಾಲಯ ಮಟ್ಟಕ್ಕೆ ಸೀಮಿತವಾಗಿಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ಪೂರ್ಣೇಶ್ ವಹಿಸಿ ಮಾತನಾಡಿದರು.

ವಿವಿ ಪ್ರಸಾರಾಂಗ ವಿಭಾಗದ ಸಹನಿರ್ದೇಶಕ ಡಾ.ಬಿ.ಇ.ಕುಮಾರ ಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೆ.ಪಿ.ಸಂಪತ್ ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry