ಮನುಷ್ಯನ ಸ್ವಾರ್ಥದಿಂದ ಪ್ರಕೃತಿಗೆ ಆಪತ್ತು

7

ಮನುಷ್ಯನ ಸ್ವಾರ್ಥದಿಂದ ಪ್ರಕೃತಿಗೆ ಆಪತ್ತು

Published:
Updated:

ಹಾಸನ: `ನೈಸರ್ಗಿಕ ಸಂಪನ್ಮೂಲ ಮತ್ತು ವಿಕೋಪ ಚಟುವಟಿಕೆಗಳ ಮೂಲಕವೇ ವಿಶ್ವದ ವಿಕಾಸವಾಗಿದೆ ಹಾಗೂ ಜೀವ ಸಂಕುಲಗಳು ಉಳಿದು ಬಾಳುತ್ತಿವೆ~ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ  ಕಾರ್ಯದರ್ಶಿ ಎಚ್.ಎ. ಅಹಮದ್ ನುಡಿದರು.ಬಿಜಿವಿಎಸ್ ಹಾಸನ ಘಟಕ ಮತ್ತು ಮುಕ್ತ ಮಹಿಳಾ ಕಲಾಯುವತಿ ಮಂಡಳಿ ಸಹಯೋಗದಲ್ಲಿ ನಗರದ ಶಾಂತಿನಗರದ ಮುಕ್ತ ಮಹಿಳಾ ಕಲಾ ಕುಟೀರದ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ನೈಸರ್ಗಿಕ ವಿಕೋಪ ತಡೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.`ನೈಸರ್ಗಿಕವಾಗಿ ಸಂಭವಿಸುವ ವಿಕೋಪಗಳು ತಕ್ಷಣದಲ್ಲಿ ಹಾನಿ ಮಾಡಿದರೂ ಅದು ನಿಸರ್ಗ ಸಮತೋಲನ ನಡೆಸಿ ಮನುಕುಲದ ಒಳಿತಿನ ವೇಗ ವರ್ಧಕವಾಗಿ ಪರಿಣಮಿಸುತ್ತವೆ. ಮಾನವನ ಸ್ವಾರ್ಥದಿಂದಾಗಿ ವಿಕೋಪಗಳು ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿವೆ. ಪರಿಸರ ವಿನಾಶದ ಪರಿಣಾಮ ಸುನಾಮಿ, ಬರ, ಸಮುದ್ರ ನೀರಿನ ಮಟ್ಟ ಏರಿಕೆ, ಹಿಮ ಕರಗುವಿಕೆಯಂಥ ವಿಕೋಪಗಳು ನೈಸ ರ್ಗಿಕವಾಗಿ ಆಗುವ ವಿಕೋಪಗಳಿಗಿಂತ ಮಾರಣಾಂತಿಕವಾಗುತ್ತಿವೆ~ ಎಂದರು. ಬಿಜಿವಿಎಸ್ ಹಾಸನ ತಾಲ್ಲೂಕು ಸಮಿತಿ ಸದಸ್ಯ ಜಯಪ್ರಕಾಶ ಕಾರ್ಯಕ್ರಮ ಉದ್ಘಾಟಿಸಿದರು.ವಿಶ್ವ ಚೇತನ ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಗೋಪಾಲ್ ಮಾತನಾಡಿದರು. 

ಮುಕ್ತಾ ಮಹಿಳಾ ಕಲಾ ಯುವತಿ ಮಂಡಳಿಯ ಆಧ್ಯಕ್ಷೆ ಮಮತಾ ಶಿವು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮಹಿಳಾ ಸಂಘಗಳ ಪ್ರತಿನಿಧಿ ಪದ್ಮವೆಂಕಟೇಗೌಡ ಹಾಗೂ  ಯಶೋದಾ ಜವರೇಗೌಡ ಉಪಸ್ಥಿತ ರಿದ್ದರು., ಮುಕ್ತಾ ಮಹಿಳಾ ಕಲಾ ಯುವತಿ ಮಂಡಳಿಯ ಕಾರ್ಯದರ್ಶಿ ವೇದಶ್ರೀ ರಾಜ್ ನಿರೂಪಿಸಿ ಸ್ವಾಗತಿಸಿದರು, ಪದ್ಮಾ ಮಂಜುನಾಥ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry