ಸೋಮವಾರ, ಮೇ 10, 2021
21 °C

ಮನೆಗಳ ತೆರವಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: ಈ ಉಪನಗರದ ಗಾಂಧಿನಗರದಲ್ಲಿ ಬಡವರು ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಲು ಮುಂದಾದ ಕಂದಾಯ ಇಲಾಖೆ ವಿರುದ್ಧ ಗುಡುಗಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಈ ತಿಂಗಳೊಳಗಾಗಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಸಿದ್ದಾರೆ.ಗಾಂಧಿನಗರಕ್ಕೆ ಇತ್ತೀಚೆಗೆ ಭೇಟಿ ನೀಡಿ ಸ್ಥಳೀಯರ ಅಹವಾಲು ಆಲಿಸಿದ ನಂತರ ಮಾತನಾಡಿದ ಅವರು, `ಜನ ಇಲ್ಲಿ ಬೀದಿಗೆ ಬಿದ್ದು ಒದ್ದಾಡುತ್ತಿದ್ದರೆ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನಿಜವಾಗಿ ಬಡ ಜನರ ಬಗ್ಗೆ ಕಾಳಜಿಯಿದ್ದರೆ ತಕ್ಷಣವೇ ಜನರ ಕಷ್ಟವನ್ನು ಪರಿಹರಿಸಲಿ~ ಎಂದು ಒತ್ತಾಯಿಸಿದರು.ಜೆಡಿಎಸ್‌ನ ಯಶವಂತಪುರ ಘಟಕದ ಅಧ್ಯಕ್ಷ ಪಂಚಲಿಂಗಯ್ಯ, ಪಕ್ಷದ ಮುಖಂಡ ಬಿ.ಕೃಷ್ಣಪ್ಪ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅರ್.ಜಿ. ಆಂಜನೇುಲು, ಬಂಜಾರುಪಾಳ್ಯ ಮಂಜುನಾಥ್, ಯುವ ಮುಖಂಡ ಅಗರ ಗೋಪಾಲ್, ಪುರಸಭೆ ಮಾಜಿ ಸದಸ್ಯ ಗೋಪಿಚಂದ್ ಸೇರಿದಂತೆ ಸಾವಿರಾರು ನಿವೇಶನದಾರರು ನ್ಯಾಯ ಒದಗಿಸಿಕೊಡುವಂತೆ ಗೌಡರಲ್ಲಿ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.