ಸೋಮವಾರ, ಜನವರಿ 27, 2020
28 °C

ಮನೆಯಂಗಳದಲ್ಲಿ ಕವಿತಾಗಾಯನ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಉಪಾಸನಾ~ ಸುಗಮ ಸಂಗೀತ ಶಾಲೆ ವತಿಯಿಂದ ಗುರುವಾರ ಸಂಜೆ 5.30ಕ್ಕೆ ಮನೆಯಂಗಳದಲ್ಲಿ ಕವಿತಾಗಾಯನ `100 ರ ಸಂಭ್ರಮ~ ಹಮ್ಮಿಕೊಳ್ಳಲಾಗಿದೆ.

ಇದರ ಪ್ರಯುಕ್ತ ಪ್ರಸಿದ್ಧ ಕಲಾವಿದರಿಂದ ಗೀತಗಾಯನ, ನೃತ್ಯ ಹಾಗೂ 300ಕ್ಕೂ ಹೆಚ್ಚು ಗಾಯಕ-ಗಾಯಕಿಯರಿಂದ ಸಮೂಹ ಗಾಯನ ಏರ್ಪಡಿಸಲಾಗಿದೆ.

ಉದ್ಘಾಟನೆಯನ್ನು ತೇಜಸ್ವಿನಿ ಅನಂತ ಕುಮಾರ್ ನೆರವೇರಿಸಲಿದ್ದರೆ. ಅತಿಥಿಗಳಾಗಿ ಡಾ.ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ, ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ಎಂ.ಎನ್. ವ್ಯಾಸರಾವ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಕಳೆದ ಎರಡು ದಶಕಗಳಿಂದ ಕಾವಿತಾಗಾಯನದ ಬೆಳವಣಿಗೆಗೆ ತಮ್ಮನ್ನು ಸಮರ್ಪಿಸಿಕೊಂಡ ಅಪರೂಪದ ವ್ಯಕ್ತಿ ಉಪಾಸನಾ ಮೋಹನ್. 1999ರ ಜೂನ್ 12ರಂದು ಉಪಾಸನಾ ಸಂಸ್ಥೆ ಹುಟ್ಟುಹಾಕಿ ಹೊಸ ಹೊಸ ಪ್ರತಿಭೆ, ಗೀತೆಗಳನ್ನು ಬೆಳೆಸುವ ಕಾರ್ಯದಲ್ಲಿ ಮುಂದಾಗಿದ್ದಾರೆ. ಕವಿ ಗೀತೆಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಸಲುವಾಗಿ `ಮನೆಯಂಗಳದಲ್ಲಿ ಕವಿತಾಗಾಯನ~ ಕಾರ್ಯಕ್ರಮ ರೂಪಿಸಿ ಈಗಾಗಲೇ 99 ಕಂತುಗಳನ್ನು ಸಂಪೂರ್ಣಗೊಳಿಸಿ 100 ಸಂಭ್ರಮಕ್ಕೆ ಕಾಲಿಡುತ್ತದೆ.

ಸ್ಥಳ: ಕೊಹಿನೂರ್ ಆಟದ ಮೈದಾನ, ರಾಮಕೃಷ್ಣ ಆಶ್ರಮ ವೃತ್ತ, ಬಸವನಗುಡಿ. ಸಂಜೆ 5.30.

ಪ್ರತಿಕ್ರಿಯಿಸಿ (+)