ಮನೆಯಂಗಳದಲ್ಲಿ ಶಂಕರ್

7

ಮನೆಯಂಗಳದಲ್ಲಿ ಶಂಕರ್

Published:
Updated:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಶನಿವಾರ ಮನೆಯಂಗಳದ ಮಾತುಕತೆಯಲ್ಲಿ ವೈದ್ಯ ಸಾಹಿತಿ ಡಾ.ಪಿ.ಎಸ್. ಶಂಕರ್ ಅವರೊಂದಿಗೆ ಸಂವಾದ.ನಾಡಿನ ವೈದ್ಯಕೀಯ ಕ್ಷೇತ್ರವನ್ನು ವೈದ್ಯಕೀಯ ಸಾಹಿತ್ಯದ ಮೂಲಕ ವಿಸ್ತಾರ ಮತ್ತು ಜನಪ್ರಿಯಗೊಳಿಸಿದವರಲ್ಲಿ ಡಾ.ಪಿ.ಎಸ್.ಶಂಕರ್ ಅವರು ಪ್ರಮುಖರು.ಇವರು ಹುಟ್ಟಿದ್ದು ಜನವರಿ 1, 1936ರಲ್ಲಿ ಈಗಿನ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕು ಹಲಗೆರೆಯಲ್ಲಿ. ತಂದೆ ಪಾಟೀಲ ಸಿದ್ದಲಿಂಗಪ್ಪ, ತಾಯಿ ಮಲ್ಲಮ್ಮ. ವೈದ್ಯ ಶಿಕ್ಷಣವನ್ನು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ ಪಡೆದರು. ತಮ್ಮ ವೈದ್ಯಕೀಯ ವ್ಯಾಸಂಗದ ಅವಧಿಯಲ್ಲಿ ಭಾರತ ಸರ್ಕಾರದ ಶಿಷ್ಯವೇತನ, ಕಾಮನ್‌ವೆಲ್ತ್ ಮೆಡಿಕಲ್ ಫೆಲೋಶಿಪ್ ಪಡೆದು ಲಂಡನ್‌ನ ಎಡಿನ್‌ಬರೋದಲ್ಲಿ ಹೆಚ್ಚಿನ ಶಿಕ್ಷಣ ಪಡೆದರು.ಗುಲ್ಬರ್ಗದ ಎಂ.ಆರ್ ಮೆಡಿಕಲ್ ಕಾಲೇಜು, ಮುಂಬೈನ ಕೆ.ಸಿ.ಸೋಮಯ್ಯ ಮೆಡಿಕಲ್ ಕಾಲೇಜು ಸೇರಿ ವಿವಿಧೆಡೆ ಪ್ರಾಚಾರ್ಯ, ಡೀನ್‌ಆಗಿ ಸೇವೆ ಸಲ್ಲಿಸಿದ್ದಾರೆ. ಅಮೆರಿಕ, ಆಸ್ಟ್ರೇಲಿಯ, ಇಟಲಿ, ಇಂಗ್ಲೆಂಡ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಉಪನ್ಯಾಸ ನೀಡಿದ್ದಾರೆ.ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಪಟ್ಟ ಸುಮಾರು 134 ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ವೈದ್ಯಕೀಯ ಸಾಹಿತ್ಯ ಕೃಷಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಮೂಜಗಂ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿಗಳಲ್ಲದೆ ಮೈಸೂರು, ಗುಲ್ಬರ್ಗ, ಕೃಷಿ ವಿವಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1000ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. 250ಕ್ಕೂ ಹೆಚ್ಚು ಭಾಷಣಗಳು ಆಕಾಶವಾಣಿಯಿಂದ ಪ್ರಸಾರಗೊಂಡಿವೆ.ಸ್ಥಳ; ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 4. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry