ಮನೆಯಂಗಳದಲ್ಲಿ ಶುಂಠಿ

7

ಮನೆಯಂಗಳದಲ್ಲಿ ಶುಂಠಿ

Published:
Updated:
ಮನೆಯಂಗಳದಲ್ಲಿ ಶುಂಠಿ

ಮಳೆನಾಡಿನ ರೈತರು ಮಳೆಗಾಲದಲ್ಲಿ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಹೂವಿನ ಗಿಡಗಳನ್ನು ಬೆಳೆಯುತ್ತಾರೆ. ಆಸರೆ ಶಿರಸಿ ಸಮೀಪದ ಹುಳಗೋಳದ ರೈತರೊಬ್ಬರು ಅಂಗಳದಲ್ಲಿ ಶುಂಠಿ ಬೆಳೆದಿದ್ದಾರೆ.ಮಲೆನಾಡಿನ ರೈತರು ಮನೆಯಂಗಳ ಮಳೆಗಾಲದಲ್ಲಿ ತರಕಾರಿ, ಸೋಣೆ, ಡೇರೆ, ಜಿನಿಯಾ ಮುಂತಾದ ಹೂಗಳನ್ನು ಬೆಳೆಯುತ್ತಾರೆ. ಶಿರಸಿ ತಾಲ್ಲೂಕಿನ ಹುಳಗೋಳದ ರೈತರೊಬ್ಬರು ಅಂಗಳದಲ್ಲಿ ಶುಂಠಿ ಬೆಳೆದು ಉತ್ತಮ ಇಳುವರಿ ಪಡೆದು ಸುತ್ತಲಿನ ರೈತರ ಗಮನ ಸೆಳೆದಿದ್ದಾರೆ.ಈ ರೈತರ ಹೆಸರು ಜಿ.ಎಂ. ಹೆಗಡೆ. ಅವರು ಪ್ರಗತಿಪರ ರೈತರು. ಅಡಿಕೆ, ತೆಂಗು, ಕೋಕೊ ಇತ್ಯಾದಿ ಹಲವು ಬೆಳೆಗಳನ್ನು ಅವರು ಬೆಳೆಯುತ್ತಾರೆ.ಹೆಗಡೆ ತಮ್ಮ ದಾಸಿನಗದ್ದೆಯ ಮನೆಯಂಗಳದಲ್ಲಿ ಎರಡು ವರ್ಷಗಳ ಹಿಂದೆ ಬಾಳೆ ಬೆಳೆದಿದ್ದರು.ಕಳೆದ ವರ್ಷ ಅಲ್ಪ ಪ್ರಮಾಣದಲ್ಲಿ ಶುಂಠಿ ಹಾಗೂ ಕೆಲವು ತರಕಾರಿಗಳನ್ನು ಬೆಳೆದಿದ್ದರು. ಈ ವರ್ಷ ಅದೇ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಮತ್ತು ನಡುವೆ ಸ್ವಲ್ಪ ತರಕಾರಿಗಳನ್ನು ಬೆಳೆದಿದ್ದಾರೆ.ಸುಮಾರು ಎರಡು ಕ್ವಿಂಟಲ್ ಶುಂಠಿ ಬೀಜಗಳನ್ನು ವ್ಯವಸ್ಥಿತವಾಗಿ ಮಡಿ ಮಾಡಿ ಹಾಕಿದ್ದೇವೆ.

 

ಬಿತ್ತನೆ ಸಮಯದಲ್ಲಿ ಸ್ವಲ್ಪ ಹಟ್ಟಿ ಗೊಬ್ಬರ, ಎರಡು ತಿಂಗಳ ನಂತರ ಬೇವಿನಹಿಂಡಿ, ಪೊಟಾಶಿಯಂ ಹಾಗೂ ಡಿ ಎ ಪಿ ರಾಸಾಯನಿಕ ಗೊಬ್ಬರ ಹಾಕಿದ್ದೇವೆ ಎಂದು ಪ್ಲಾಟಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ತಿಮ್ಮಯ್ಯ ಪಟಗಾರ ಹೇಳುತ್ತಾರೆ.ಕಪ್ಪು ಮಣ್ಣಾಗಿದ್ದರೇ ಶುಂಠಿ ಇಳುವರಿ ಇನ್ನೂ ಹೆಚ್ಚಾಗಿರುತ್ತಿತ್ತು.ಖಡಿಗಲ್ಲಿನ ಗೊಚ್ಚು ಮಣ್ಣಿನಲ್ಲಿ ಶುಂಠಿ ಚೆನ್ನಾಗಿ ಬರುವುದಿಲ್ಲ  ಎನ್ನುತ್ತಾರೆ ತಿಮ್ಮಯ್ಯ.ಕೂಲಿಯಾಳುಗಳ ಅಭಾವದಿಂದ ಈಗ ಬೇಸಾಯ ಮಾಡುವುದು ಕಷ್ಟವಾಗಿದೆ. ಆಳುಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದ್ದರೆ ಮನೆ ಅಂಗಳದಲ್ಲಿ, ಹಿತ್ತಲಲ್ಲಿ ಇನ್ನೂ ಹೆಚ್ಚು ಶುಂಠಿ ಬೆಳೆಯಬಹುದು. ಅಂಗಳವನ್ನು ಹಾಳು ಬಿಡುವುದಕ್ಕಿಂತ ಶುಂಠಿ ಬೆಳೆಯುವುದು ಲಾಭದಾಯಕ ಎನ್ನುತ್ತಾರೆ ಹೆಗಡೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry