ಮನೆಯೇ ಕಚೇರಿಯಾದಾಗ...!

7

ಮನೆಯೇ ಕಚೇರಿಯಾದಾಗ...!

Published:
Updated:
ಮನೆಯೇ ಕಚೇರಿಯಾದಾಗ...!

ಮನೆಯಲ್ಲಿಯೇ ಕಚೇರಿಯನ್ನು ತೆರೆಯುವವರು ಇಂದು ಸಾಮಾನ್ಯ. ಕೆಲವರು ಮನೆಯೊಳಗೆಯೇ ಕಚೇರಿಗಾಗಿ ಜಾಗ ಕಂಡುಕೊಂಡರೆ, ಇನ್ನು ಕೆಲವರು ಮನೆಯ ಒಂದು ಭಾಗವನ್ನೇ ಕಚೇರಿಯನ್ನಾಗಿ ಪರಿವರ್ತಿಸುವುದೂ ಸಾಮಾನ್ಯದ ವಿಷಯವಾಗಿದೆ. ಇಂದು ತಂತ್ರಜ್ಞಾನದಲ್ಲಿ ಕಂಡುಬಂದ ಪ್ರಗತಿ ಮನೆ-ಕಚೇರಿ ಎಂಬ ಅರ್ಥವನ್ನು ಇನ್ನಷ್ಟು ಸ್ಪಷ್ಟಪಡಿಸಿದೆ. ಕೆಲವರು ಮೊದಲೇ ಸೂಕ್ತ ಯೋಚನೆ ಮಾಡಿ ಒಳಾಂಗಣ ವಿನ್ಯಾಸ ಮಾಡುವಾಗಲೇ ಇದಕ್ಕೆಂದು ಜಾಗವನ್ನು ನಿಗದಿಪಡಿಸುತ್ತಾರೆ.ಆದರೆ, ಮನೆಯಲ್ಲಿಯೇ ಕಚೇರಿಯನ್ನು ನಿರ್ಮಿಸುವುದಾದರೂ ಹೇಗೆ? ಸೋಲ್‌ಸ್ಕೇಪ್ ಫರ್ನಿಚರ್ ಆ್ಯಂಡ್ ಮೋರ್‌ನ ಪಾಲುದಾರರಾದ ಶ್ವೇತಾ ಗುಪ್ತಾ ಇದಕ್ಕೆ ಕೆಲವು ಸಲಹೆಗಳನ್ನು ನೀಡುತ್ತಾರೆ. ಮನೆಯ ಕಚೇರಿಯಿಂದ ಯಾವ ರೀತಿಯ ಕೆಲಸಗಳನ್ನು ನಿರ್ವಹಿಸುತ್ತೀರಿ ಎಂಬುದನ್ನು ಮೊದಲು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಮೊತ್ತಮೊದಲ ಸಲಹೆ ನೀಡುತ್ತಾರೆ. ನಿಮ್ಮ ಮನೆ- ಕಚೇರಿ ಎನ್ನುವುದು ಸಹೋದ್ಯೋಗಿಗಳೊಂದಿಗೆ ಚರ್ಚೆ ನಡೆಸುವ ಸ್ಥಳವಾಗಿರಬಹುದು, ಅಥವಾ ಅದು ಯಾವುದೋ ಗಂಭೀರ ವಿಷಯವನ್ನು ಕಾರ್ಯರೂಪಕ್ಕೆ ತರುವ ಖಾಸಗಿ ಜಾಗವಾಗಿರಬಹುದು~ ಎನ್ನುತ್ತಾರೆ      ಅವರು.ಕಚೇರಿ ಎನ್ನುವುದು ಮನೆಯ ವಾತಾವರಣಕ್ಕಿಂತ ಸಂಪೂರ್ಣ ಭಿನ್ನವಾಗಿರಬೇಕು. ಕಚೇರಿಯ ಗೋಡೆಯ ಬಣ್ಣ, ಒಳಾಂಗಣ ವಿನ್ಯಾಸ ಅದು ಸಾಂಪ್ರದಾಯಿಕ, ಸಮಕಾಲೀನ ಅಥವಾ ಹೊಸದು ಆಗಿರಲಿ ಎಲ್ಲವನ್ನೂ ಮನದಲ್ಲಿಟ್ಟುಕೊಳ್ಳಬೇಕು. ಗೋಡೆಗಳಿಗೆ ಗಾಢ ಬಣ್ಣಕ್ಕಿಂತ ಬಿಳಿ ಬಣ್ಣದ ಶೇಡ್‌ಗಳು, ನೀಲಿ ಬಣ್ಣದ ಪೇಸ್ಟಲ್ ಶೇಡ್‌ಗಳನ್ನು ಹಚ್ಚಿದಲ್ಲಿ ಈ ಬಣ್ಣಗಳು ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ 3 ಎಂ ಇಂಡಿಯಾದ ವಾಸ್ತುವಿನ್ಯಾಸ ಮಾರುಕಟ್ಟೆಯ ವಿಭಾಗೀಯ ಅಧಿಕಾರಿ ಹರ್ಷವರ್ಧನ ಜಯಂತ್.`ಮನೆ- ಕಚೇರಿ ಎನ್ನುವುದು ನೀವು ಏಕಾಂತದಲ್ಲಿ ಕಾರ್ಯನಿರ್ವಹಿಸುವ ಜಾಗವಾಗಿರಬೇಕು. ಗಾಳಿ ಮತ್ತು ಬೆಳಕು ಚೆನ್ನಾಗಿ ಕೋಣೆಯೊಳಕ್ಕೆ ಬರುವಂತೆ ವಿಶಾಲವಾದ ಬಾಗಿಲು ಮತ್ತು ಕಿಟಕಿಗಳಿರಬೇಕು. ಗಾಳಿ ಮತ್ತು ಬೆಳಕು ಚೆನ್ನಾಗಿ ಒಳಗೆ ಬರುವಂತಿದ್ದಲ್ಲಿ ಮಾತ್ರ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಒಂದು ವೇಳೆ ಇದು ದೊರೆಯದಿದ್ದಲ್ಲಿ ಸ್ಪ್ರೆಕ್ಟ್ರಮ್ ಲೈಟ್ ಮತ್ತು ಗಾಳಿಯನ್ನು ಶುದ್ಧಿಗೊಳಿಸುವ ಗಿಡಗಳನ್ನಿಡಬೇಕು. ಕೋಣೆಯ ಹೊರಗಿನ ಶಬ್ದ ಜೋರಾಗಿ ಕೇಳಿಸುವಂತಿರಬಾರದು~ ಎನ್ನುತ್ತಾರೆ ಕೊಚ್ಚು ತೊಮ್ಮನ್ ಅಸೋಸಿಯೇಟ್ಸ್‌ನ ಕೊಚ್ಚು ತೊಮ್ಮನ್ ಮ್ಯಾಥ್ಯೂ.ಮನೆ-ಕಚೇರಿಯಲ್ಲಿ ಬಳಸುವ ಪೀಠೋಪಕರಣಗಳು ಆರಾಮದಾಯಕ ಅನುಭವವನ್ನೂ ನೀಡುವಂತಿರಬೇಕು. ಜೊತೆಗೆ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ಗಳು, ಪುಸ್ತಕಗಳು, ಸಿಡಿ  ಮುಂತಾದವುಗಳನ್ನಿಡಲು ಜಾಗವೂ ಅಲ್ಲಿರಬೇಕು ಎಂಬುದು ಕೆಲವರ ಅಭಿಪ್ರಾಯ.ಇಂಥ ಜಾಗಗಳಿಗೆ ಮಾಡ್ಯುಲರ್ ಫಿಟ್ಟಿಂಗ್‌ಗಳು ಚೆನ್ನಾಗಿ ಹೊಂದಿಕೆಯಾಗುತ್ತವೆ. ರಿಯಲ್ ಡೆಸ್ಕ್ ಬದಲಾಗಿ ಒಂದೆರಡು ಡೈನಿಂಗ್ ಟೇಬಲ್‌ಗಳು ಮತ್ತು ಆರಾಮ ಕುರ್ಚಿಗಳನ್ನು  ಬಳಸಿ. ನಿಮಗೆ ಆರಾಮವಾಗಿ ಕೆಲಸ ಮಾಡುವ ರೀತಿಯಲ್ಲಿ ಕಚೇರಿಯಲ್ಲಿ ಸ್ಥಳಾವಕಾಶವಿರಬೇಕು. ಹಾಗಿರುವಾಗಿ ಅತ್ಯಂತ ಉತ್ತಮವಾದ ಆಯ್ಕೆಯನ್ನೇ ಆರಿಸಿಕೊಳ್ಳಿ ಎನ್ನುತ್ತಾರೆ ಒಎಂಎ ಲಿವಿಂಗ್‌ನ ಕ್ರಿಶ್ಚಿಯನ್ ಬೀಟ್‌ಜರ್.ಪೀಠೋಪಕರಣಗಳ ಪಟ್ಟಿಯಲ್ಲಿ ಡೆಸ್ಕ್‌ಗಳನ್ನು ಆಯ್ಕೆ ಮಾಡುವಾಗಲೂ ಶ್ರದ್ಧೆ ಅಗತ್ಯ. ಏಕೆಂದರೆ ಕೋಣೆ ಸಣ್ಣದಾದಂತೆ ಭಾಸವಾಗುವ ಪೀಠೋಪಕರಣಗಳು ಖಂಡಿತಾ ಬೇಡ, ಪುಸ್ತಕಗಳನ್ನಿಡಲು ಗೋಡೆಯ್ಲ್ಲಲೇ ಶೆಲ್ಫ್‌ಗಳನ್ನು ನಿರ್ಮಿಸುವುದು ಸೂಕ್ತ. ಇದೇ ವೇಳೆ ಚಕ್ರವಿರುವ ಪೀಠೋಪಕರಣಗಳನ್ನೂ ಬಳಸಿದಲ್ಲಿ ಬೇಕಾದೆಡೆಗೆ ಅವುಗಳನ್ನು ಸಾಗಿಸಲು ಸಾಧ್ಯ ಎನ್ನುತ್ತಾರೆ ಮ್ಯಾಥ್ಯೂ. ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹೂಪಯೋಗಿ ಮನೆ-ಕಚೇರಿ ಪೀಠೋಪಕರಣಗಳನ್ನು ಆರಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಸ್ಟುಡಿಯೊ ಎ ಪ್ಲಸ್ ಐ ನಿರ್ದೇಶಕರಾದ ಸಚಿನ್ ಸೆಹಗಲ್.ಎಲ್ಲಕ್ಕಿಂತ ಮುಖ್ಯವಾಗಿ ಮನೆ-ಕಚೇರಿ ನಿಮ್ಮ ವ್ಯಕ್ತಿತ್ವ ಪ್ರತಿಬಿಂಬಿಸುವಂತಿರಬೇಕು. ಇದಕ್ಕಾಗಿ ಒಳಾಂಗಣ ವಿನ್ಯಾಸಗಾರರ ನೆರವನ್ನು ಕೋರುವುದು ಅತ್ಯುತ್ತಮ. ನಿಮಗೆ ಏನು ಬೇಕೋ ಅವುಗಳ ಚಿತ್ರ ತೆಗೆದು ತೋರಿಸಿ. ಆಗ ನಿಮ್ಮ ಆಯ್ಕೆ ಅವರಿಗೆ ಸರಿಯಾಗಿ ಅರ್ಥವಾಗುತ್ತದೆ. ಗಾಢ ಬಣ್ಣಗಳು ನಿಮ್ಮ ಏಕಾಗ್ರತೆ ನಾಶಪಡಿಸುವುದರಿಂದ ತಿಳಿ ಬಣ್ಣಗಳು ಗೋಡೆಗೆ ಸೂಕ್ತ.ಸಮಕಾಲೀನ ವಿನ್ಯಾಸದ ಕುರಿತು ಹೇಳುವುದಾದಲ್ಲಿ ಸ್ಟೇನ್‌ಲೆಸ್ ಸ್ಟೀಲ್‌ನ ಆರ್ಮ್‌ಚೇರ್ ಮತ್ತು  ಗೋಡೆಯ ಮೇಲಿನ ಜ್ಯಾಮಿತಿಯ ಕಲಾಕೃತಿ ಮನೆ-ಕಚೇರಿಗೆ ವಿಶೇಷ ನೋಟ (ಕ್ಲಾಸಿಕ್ ಲುಕ್) ಕೊಡುತ್ತದೆ. ಇದೇ ವೇಳೆ ಒಳಾಂಗಣ ವಿನ್ಯಾಸದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಗಾಳಿ ಬೆಳಕು ಧಾರಾಳವಾಗಿ ಬರುತ್ತಿದ್ದರೆ ವಿದ್ಯುತ್ ಬಿಲ್‌ನಲ್ಲಿ ಉಳಿತಾಯ ಮಾಡಬಹುದು  ಎನ್ನುತ್ತಾರೆ ಮ್ಯಾಥ್ಯೂ.ನಿಮ ಮನೆ ಕಚೇರಿಗೆ ಧಾರಾಳ ಬೆಳಕು ಹರಿದು ಬರುತ್ತಿದ್ದರೆ ಗಾಢ ಬಣ್ಣದ ಮರದ ಪೀಠೋಪಕರಣಗಳು ಮತ್ತು ಡಾರ್ಕ್ ಫ್ಲೋರಿಂಗ್ ಅತ್ಯುತ್ತಮ. ಒಂದು ವೇಳೆ ಕಚೇರಿಯ ಜಾಗ ಸಣ್ಣದಾಗಿದ್ದರೆ ಮತ್ತು ಬೆಳಕು ಅಷ್ಟೇನೂ ಧಾರಾಳವಾಗಿ ಒಳಸೇರದಿದ್ದರೆ  ಎನ್ನುತ್ತಾರೆ ಎ 360 ಟ್ರೆಂಡ್‌ನ ಮದನ್ ವಾಸುದೇವನ್.ಪೀಠೋಪಕರಣಗಳ ವಿಷಯಕ್ಕೆ ಬಂದಾಗ ಮರದ ಪೀಠೋಪಕರಣ ಇಷ್ಟಪಡುವವರು ಪ್ಲಾಂಟೇಶನ್ ಮರಗಳಾದ ರಬ್ಬರ್ ಅಥವಾ ಅಕೇಶೀಯಾದಿಂದ ನಿರ್ಮಿಸಿದ ಪೀಠೋಪಕರಣಗಳನ್ನು ಆರಿಸಿಕೊಳ್ಳಬಹುದು.  ಒಂದು ವೇಳೆ ವಾಸ್ತುವನ್ನು ನಂಬುವವರಾದರೆ ಮನೆಯ ದಕ್ಷಿಣ ಅಥವಾ ಪಶ್ಚಿಮದಲ್ಲಿ ಕಚೇರಿಯಿರಬೇಕು ಎನ್ನುವುದು ಮ್ಯಾಥ್ಯೂ ಅಭಿಪ್ರಾಯ. ಮನೆಯ ಈಶಾನ್ಯ ಭಾಗದಲ್ಲಿ ಕಚೇರಿ ಬೇಡವೇ ಬೇಡ.  ಕಚೇರಿಯ ಪ್ರವೇಶ ದ್ವಾರವು ದಕ್ಷಿಣಕ್ಕೆ ಮುಖಮಾಡಿರಬೇಕು. ಉತ್ತರ ದಿಕ್ಕಿನಿಂದ ಕಚೇರಿಯೊಳಕ್ಕೆ ಪ್ರವೇಶ ಸಲ್ಲದು. ಕಚೇರಿಯ ಯಾವುದೇ ಬಾಗಿಲಿನಲ್ಲಿ ಯಾವುದೇ ಅಡೆತಡೆಗಳು ಇಲ್ಲದಂತೆನೋಡಿಕೊಳ್ಳಬೇಕು. ಕಿಟಕಿಗಳು ಉತ್ತರ ಅಥವಾ ಪೂರ್ವ ಭಾಗದಲ್ಲಿರಬೇಕು. ಡೆಸ್ಕ್‌ಗಳನ್ನು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿಡಬೇಕು. ಈಶಾನ್ಯ ಭಾಗದಲ್ಲಿ ಡೆಸ್ಕ್‌ಗಳು ಬೇಡ. ಕಚೇರಿಗೆ ಸಂಬಂಧಪಟ್ಟ ದಾಖಲೆಗಳನ್ನು ವಾಯವ್ಯ ದಿಕ್ಕಿನಲ್ಲಿ ಸಂಗ್ರಹಿಸಿ ಇಡಬೇಕು ಎಂದು ಅವರು ವಿವರಿಸುತ್ತಾರೆ.ಮಿತ ಬಳಕೆ, ಮರುಬಳಕೆಯನ್ನು ಯಾವಾಗಲೂ ಗಮನದಲ್ಲಿ ಇಟ್ಟುಕೊಂಡು ಒಳಾಂಗಣ ವಿನ್ಯಾಸಕ್ಕೆ ಬಿದಿರನ್ನು ಬಳಸುವುದು ಒಳಿತು ಎನ್ನುತ್ತಾರೆ ಪಹಾರ್‌ಪುರ ಬ್ಯುಸಿನೆಸ್ ಸೆಂಟರ್ ಮತ್ತು ಸಾಫ್ಟ್‌ವೇರ್ ಟೆಕ್ನಾಲಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಮಲ್ ಮೆಟ್ಲೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry