ಮಂಗಳವಾರ, ಜನವರಿ 28, 2020
17 °C

ಮನೆಯೊಳಗೆ ಮೊಸಳೆ: ಬೆಚ್ಚಿಬಿದ್ದ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಸುಮಾರು 1.7 ಮೀಟರ್ ಉದ್ದದ ಮೊಸಳೆಯೊಂದು ಅನಿರೀಕ್ಷಿತ ಅತಿಥಿಯಾಗಿ ಮನೆಯೊಳಕ್ಕೆ ಪ್ರವೇಶಿಸಿ ಕುಟುಂಬವೊಂದನ್ನು ಬೆಚ್ಚಿಬೀಳಿಸಿದ ವಿಲಕ್ಷಣ ಘಟನೆ ಆಸ್ಟ್ರೇಲಿಯಾದ ಡಾರ್ವಿನ್‌ನಲ್ಲಿ ನಡೆದಿದೆ.

ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿರುವ ಬೀಸ್ ಕ್ರೀಕ್ ಎಂಬಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಈ ಭಯ ಬೀಳಿಸುವ ಘಟನೆಗೆ ಸಾಕ್ಷಿಯಾಗಿದೆ.

ಶನಿವಾರ ಬೆಳಿಗ್ಗೆ ಜೋರಾಗಿ ನಾಯಿಬೊಗಳುತ್ತಿರುವುದನ್ನು ಕಂಡು ಮನೆಯವರು ಸುತ್ತಮುತ್ತ ತಪಾಸಣೆ ನಡೆಸುತ್ತಿರುವಾಗ  ಉಪ್ಪುನೀರಿನಲ್ಲಿ ವಾಸಿಸುವ ಮೊಸಳೆಯೊಂದು ಸುಳಿದಾಡುತ್ತಿದ್ದುದು  ಕಂಡು ಬಂತು.

ಮನೆಯೊಳಗೆ ಮೊಸಳೆ ಇದೆ ಎಂದು ತಿಳಿದಾಗ ಮನೆಯೊಡತಿ ಜೊ ಡೋಡ್ ಅವರು ಭಯದಿಂದ ಕಿರುಚಿದರು.

ಬಳಿಕ ಆಗಮಿಸಿದ ಅರಣ್ಯಾಧಿಕಾರಿಗಳು ಮೊಸಳೆಯನ್ನು ಹಿಡಿದರು.

ಪ್ರತಿಕ್ರಿಯಿಸಿ (+)