ಶುಕ್ರವಾರ, ಜೂನ್ 25, 2021
24 °C

ಮನೆ ಕಂದಾಯ ಪಾವತಿ ಕಡ್ಡಾಯ: ಈಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮಾಪುರ: ಜನರು ಮನೆ ಮತ್ತು ನೀರಿನ ಕಂದಾಯವನ್ನು ಕಡ್ಡಾಯವಾಗಿ ಪಾವತಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಈಶ್ವರ್ ಮನವಿ ಮಾಡಿದರು.ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಗ್ಯಂ ಗ್ರಾಮ ಪಂಚಾಯಿತಿ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ಕರ ವಸೂಲಿ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರವನ್ನೇ ಆವಲಂಬಿಸದೇ ಗ್ರಾಮಗಳ ಅಭಿವೃದ್ಧಿಗೆ ಅಗತ್ಯ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸುವತ್ತ ಜನತೆ ಗಮನಹರಿಸಬೇಕು. ಜನರು ಮನೆ ಮತ್ತು ನೀರಿನ ಕಂದಾಯ ಪಾವತಿಸುವ ಮೂಲಕ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಹಕರಿಸಬೇಕು ಎಂದು ಹೇಳಿದರು.ನಂತರ ಹೂಗ್ಯಂ ಗ್ರಾಮದಲ್ಲಿ ಜಿ.ಪಂ. ಉಪಾಧ್ಯಕ್ಷರ ನೇತೃತ್ವದಲ್ಲಿ ಜಾಥ ನಡೆಸಿ ಕಂದಾಯ ವಸೂಲು ಮಾಡಲಾಯಿತು. ಒಂದೇ ದಿನ 25 ಸಾವಿರ ಕಂದಾಯ ಸಂಗ್ರಹಿಸಲಾಯಿತು. ತಾ.ಪಂ. ಸದಸ್ಯ ಬಸವರಾಜು, ಗ್ರಾ.ಪಂ. ಅಧ್ಯಕ್ಷೆ ಬಿಸಲಮ್ಮ, ಕಾರ್ಯದರ್ಶಿ ಆರ್. ಉಷಾ, ಗ್ರಾ.ಪಂ. ಸದಸ್ಯ ಅಂಕರಾಜು, ಒಂಟಿಗೌಡರು, ಸಿದ್ದರಾಜು, ಭಾಗ್ಯ, ಮಹಾದೇವ, ರಂಗಶೆಟ್ಟಿ ಬಿಲ್ ಕಲೆಕ್ಟರ್ ದೊರೆಯ, ವೆಂಕಟೇಶ್, ಇತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.