ಮನೆ ಧ್ವಂಸ ಗೊಳಿಸಿದ ಕಿಡಿಗೇಡಿಗಳು

7
ಹಲ್ಲೆ: ದೂರು ನೀಡಿದಕ್ಕೆ ಆಕ್ರೋಶ

ಮನೆ ಧ್ವಂಸ ಗೊಳಿಸಿದ ಕಿಡಿಗೇಡಿಗಳು

Published:
Updated:

ಕನಕಪುರ: ಹಲ್ಲೆ ನಡೆಸಿದ್ದಲ್ಲದೆ ಈ ಸಂ ಬಂಧ ದೂರು ನೀಡಿದ್ದಕ್ಕಾಗಿ ಆಕ್ರೋಶ ಗೊಂಡ ಗುಂಪೊಂದು ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿ, ನಾಲ್ಕೈದು ಮನೆಗಳನ್ನು ಧ್ವಂಸ ಮಾಡಿರುವ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ವರ್ತಿಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.ಘಟನೆಯಲ್ಲಿ ತಿರುಮಲ್ಲಯ್ಯ, ಶ್ರೀನಿ ವಾಸ್‌, ವೆಂಕಟಯ್ಯ, ಬಸವರಾಜು ,ಮಲ್ಲೇಶ್‌ ಮತ್ತು ಚಿಕ್ಕಸೊಂಬಯ್ಯ ಅವ ರಿಗೆ ಸೇರಿದ ಮನೆಗಳು ಹಾನಿಯಾಗಿವೆ.ದಾಂಧಲೆ ನಡೆದಿರುವ ಕುರಿತು ಸಂಭೇ ಗೌಡ, ಅವರ ಪುತ್ರರಾದ ರಾಜೇಂದ್ರ, ನಾಗೇಂದ್ರ ಮತ್ತು ಕಿರಣ, ವೆಂಕಟೇಶ್‌, ರಾಘು ಎಂಬುವರ ವಿರುದ್ಧ ದೂರು ದಾ ಖಲಾಗಿದೆ.  ಪಿಎಸ್‌ಐ ಮಹದೇವಸ್ವಾಮಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ.ಘಟನೆಯ ವಿವರ: ಬನ್ನಿಮುಕ್ಕೋಡ್ಲು ಗ್ರಾಮ ವ್ಯಾಪ್ತಿಯ ವರ್ತಿಪುರ ಗ್ರಾಮದ ನೆರೆಯ ಗ್ರಾಮ ಸಿಂಗಾರಿದೊಡ್ಡಿ ಗೋವಿಂ ದಯ್ಯ ಸೋಮವಾರ ರಾತ್ರಿ ವರ್ತಿಪುರದ ಸಂಬಂಧಿಕರ ಮನೆಗೆ ಊಟಕ್ಕೆ ಬಂದು ರಾತ್ರಿ 7.45ಕ್ಕೆ ವಾಪಾಸಾಗುತ್ತಿದ್ದ ವೇಳೆ ಅದೇ ಗ್ರಾಮದ ವೆಂಕಟೇಶ್‌ ದುರು ದ್ದೇಶದಿಂದ ಗೋವಿಂದಯ್ಯನ ಮೇಲೆ ಬೈಕ್‌ ಹತ್ತಿಸಲು ಮುಂದಾಗಿದ್ದೂ ಅಲ್ಲದೇ ಬನ್ನಿಮುಕ್ಕೋಡ್ಲು ಸಂಭೇಗೌಡ, ಅವರ ಪುತ್ರರಾದ ರಾಜೇಂದ್ರ ಮತ್ತು ನಾಗೇಂ ದ್ರನಿಗೆ ಅಲ್ಲಿಗೆ ಬರುವಂತೆ ಹೇಳಿದ್ದಾನೆ ಎನ್ನಲಾಗಿದೆ. ಅಲ್ಲಿಗೆ ಬಂದ ಈ ಮೂವರು ತಾವು ಮಾಡುತ್ತಿರುವ ಅಕ್ರ ಮ ಮರಳು ದಂಧೆಗೆ ಅಡ್ಡಿಉಂಟು ಮಾ ಡುತ್ತಿದ್ದಾನೆ ಎಂದು ಗೋವಿಂದಯ್ಯನ ಮೇಲೆ ಹಲ್ಲೆ ನಡೆಸಿದ್ದಾರೆ.ಹಲ್ಲೆಯಿಂದ ಗಾಯಗೊಂಡ ಗೋವಿಂದಯ್ಯ ಚಿಕಿತ ್ಸೆಗಾಗಿ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆ ನಡೆದಿರುವ ಕುರಿತು ಗೋವಿಂ ದಯ್ಯ ದೂರು ನೀಡಿದ ವಿಷಯ ತಿಳಿದ ಸಂಬೇಗೌಡ ತಮ್ಮ ಪುತ್ರರೂ ಸೇರಿದಂತೆ ಇತರರೊಂದಿಗೆ ಸೇರಿದ ಮಧ್ಯರಾತ್ರಿ 1ರ ಸುಮಾರಿಗೆ ವರ್ತಿಪುರದ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿ, ತಮ್ಮ ವಿರುದ್ಧ ಸಂಚು ನಡೆಸುವವರನ್ನು ಕೊಲೆ ಮಾಡು ವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆ ಗೊಳಗಾದ ಗ್ರಾಮಸ್ಥರು ಪೊಲೀ ಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಹಸೀ ಲ್ದಾರ್‌ ಡಾ.ದಾಕ್ಷಾಯಿಣಿ, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು.‘ಮನೆಯಲ್ಲಿನ ಗಂಡಸರೆಲ್ಲರೂ ಜಮೀ ನಿನಲ್ಲಿನ ಬೆಳೆ ಕಾವಲಿಗೆ ಹೋಗಿದ್ದರು. ಆ ಸಂದರ್ಭವನ್ನು ನೋಡಿಕೊಂಡು ಸೋಮ ವಾರ ಮಧ್ಯರಾತ್ರಿ 1 ರ ವೇಳೆಯಲ್ಲಿ ದಾಳಿ ನಡೆಸಿದ್ದಾರೆ, ಈ ಘಟನೆಯಿಂದ ನಾವು ಭಯಭೀತ ರಾಗಿದ್ದೇವೆ. ಮನೆಗಳಿಗೆ ಹಾನಿ ಯಾಗಿದೆ. ನಮಗೆ ರಕ್ಷಣೆ ಒದಗಿಸಬೇಕು’ ಎಂದು ಮಹಿಳೆಯರು ಮನವಿ ಮಾಡಿ ದರು.ಒತ್ತಾಯ: ಸಾರ್ವಜನಿಕ ಸಮಾಜ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಂ.ಶಿವಲಿಂಗಯ್ಯ, ತಾಲ್ಲೂಕು ಅಧ್ಯಕ್ಷ ಸಿದ್ದಬೀರಯ್ಯ, ಮುಖಂಡರಾದ ಏಳಗಳ್ಳಿ ಶಿವಕುಮಾರ್‌, ಗೋಪಿ ಗ್ರಾಮಕ್ಕೆ ಭೇಟಿ ನೀಡಿದರು.‘ತಾಲ್ಲೂಕಿನಾದ್ಯಂತ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿ ದವರನು ಬಂಧಿಸಿ,  ದಲಿತರಿಗೆ ಸೂಕ್ತ ರಕ್ಷಣೆ ನೀಡಿ ಭದ್ರತೆ ಒದಗಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry