ಶುಕ್ರವಾರ, ನವೆಂಬರ್ 22, 2019
19 °C

ಮನೆ ನಿರ್ಮಿಸಿ ಕೊಡಿ: ಬಾಡಿಗೆದಾರರ ಒತ್ತಾಯ

Published:
Updated:

ಬೆಂಗಳೂರು:  `ಇಡಬ್ಲ್ಯೂಎಸ್ ವಸತಿ ಸಮುಚ್ಚಯದ ಮೂಲ ನಿವಾಸಿಗಳಿಂದ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಇಲ್ಲೇ ವಾಸ ಮಾಡುತ್ತಿರುವ ನಮಗೂ ಮನೆಗಳನ್ನು ನಿರ್ಮಿಸಿಕೊಡಬೇಕು. ಇಲ್ಲದಿದ್ದರೇ ಶೆಡ್‌ಗಳನ್ನು ತೆರವುಗೊಳಿಸದೆ ಹೋರಾಟ ಮುಂದುವರಿಸಲಾಗುವುದು' ಎಂದು ವಸತಿ ಸಮುಚ್ಚಯದ ಬಳಿ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡಿರುವ ಕೊಳೆಗೇರಿ ನಿವಾಸಿಗಳು ಪಟ್ಟು ಹಿಡಿದಿದ್ದಾರೆ.`ನಾವು ಇಡಬ್ಲ್ಯೂಎಸ್ ವಸತಿ ಸಮುಚ್ಚಯದ ಮೂಲ ನಿವಾಸಿಗಳಲ್ಲ ನಿಜ. ಆದರೆ, 15-20 ವರ್ಷಗಳಿಂದ ಇಲ್ಲೇ ವಾಸ ಮಾಡುತ್ತಿದ್ದೇವೆ. ಇಲ್ಲಿದ್ದ ಮೂಲ ನಿವಾಸಿಗಳು ತಮ್ಮ ಮನೆಗಳನ್ನು ಬಾಡಿಗೆ ಕೊಟ್ಟು ಬೇರೆ ಕಡೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮನೆ ಬಾಡಿಗೆ ಕೊಡುವ ವೇಳೆ ಮುಂಗಡವಾಗಿ ರೂ.5,000 ಪಡೆದಿರುವ ಅವರು, ಪ್ರತಿ ತಿಂಗಳು ್ಙ500ರಂತೆ ಮನೆ ಬಾಡಿಗೆ ಪಡೆಯುತ್ತಿದ್ದರು. ಈಗ ನಮ್ಮನ್ನು ಇಲ್ಲಿನ ಮೂಲ ನಿವಾಸಿಗಳಲ್ಲ ಎಂದು ಆರೋಪಿಸುತ್ತಿರುವುದು ಸರಿಯಲ್ಲ. ನಿಜಕ್ಕೂ ಆರ್ಥಿಕವಾಗಿ ಹಿಂದುಳಿದ ವರ್ಗದವರು ಯಾರು ಎಂಬ ಬಗ್ಗೆ ಪಾಲಿಕೆ ತನಿಖೆ ನಡೆಸಿ ನಂತರ  ನಿರ್ಣಯ ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.`1993ರಲ್ಲಿ ಇಡಬ್ಲ್ಯೂಎಸ್ ವಸತಿ ಸಮುಚ್ಚಯಕ್ಕೆ ಬಂದ ನಾನು, 12ನೇ ಬ್ಲಾಕ್‌ನಲ್ಲಿರುವ ಮನೆಯೊಂದನ್ನು ಬಾಡಿಗೆ ಪಡೆದು ವಾಸ ಮಾಡುತ್ತಿದ್ದೆ. ಆ ಮನೆಯ ಮಾಲೀಕರಿಗೆ ್ಙ5,000 ಮುಂಗಡ ಕೊಟ್ಟು ಪ್ರತಿ ತಿಂಗಳು ರೂ. 500ರಂತೆ ಬಾಡಿಗೆ ಕೊಡುತ್ತಿದ್ದೆ. ಆದರೆ, ಬಿಬಿಎಂಪಿ ಇಲ್ಲಿನ ಮೂಲ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಶೆಡ್‌ಗಳನ್ನು ತೆರವುಗೊಳಿಸುವ ವೇಳೆ ಸ್ಥಳಕ್ಕೆ ಬಂದು ಹಕ್ಕುಪತ್ರಗಳನ್ನು ಪಡೆದುಕೊಂಡು ಹೋಗಿದ್ದಾರೆ. ಅಲ್ಲದೇ, ನಮ್ಮ ವಿರುದ್ಧವೇ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಶಾಶ್ವತ ನೆಲೆ ಕಲ್ಪಿಸಿಕೊಡುವುದಾಗಿ ಮಾತು ಕೊಟ್ಟಿದ್ದ ಕೆಲ ಸ್ಥಳೀಯ ರಾಜಕೀಯ ಮುಖಂಡರೂಸಹ ಸರ್ಕಾರ ಹಾಗೂ ಖಾಸಗಿ ಸಂಸ್ಥೆಯ ಲಾಬಿಗೆ ಮಣಿದಿದ್ದಾರೆ' ಎಂದು ಶಾಂತಾ ಮೇರಿ ಆಕ್ರೋಶ ವ್ಯಕ್ತಪಡಿಸಿದರು.`ಇಡಬ್ಲ್ಯೂಎಸ್ ವಸತಿ ಸಮುಚ್ಚಯದಲ್ಲಿ ಒಟ್ಟು 1,512 ಮನೆಗಳಿದ್ದವು. ಈ ಪೈಕಿ ಕೇವಲ 120 ಮನೆಗಳಲ್ಲಿ ಮೂಲ ನಿವಾಸಿಗಳು ವಾಸ ಮಾಡುತ್ತಿದ್ದರು. 1,177 ಮನೆಗಳಲ್ಲಿ ಬಾಡಿಗೆದಾರರು ಇದ್ದರು. ಉಳಿದ ಮನೆಗಳು ಖಾಲಿ ಇದ್ದವು. ಆದರೆ, ಕಟ್ಟಡದ ಒಂದು ಬ್ಲಾಕ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿದ ಪಾಲಿಕೆ, ಇಡೀ ಕಟ್ಟಡವನ್ನು ನೆಲಸಮ ಮಾಡಿತ್ತು. ನಂತರ ಶೆಡ್ ಹಾಕಿಕೊಂಡ ವಾಸ ಮಾಡುತ್ತಿದ್ದೆವು' ಎಂದರು.ಮನೆ ಕಟ್ಟಿಸಿಕೊಡುವುದು ಬೇಡ: `ಮನೆಯ ಆಸೆಗೆ ನಾನು ಇಡಬ್ಲ್ಯೂಎಸ್ ವಸತಿ ಸಮುಚ್ಚಯದ ಬಳಿ ಶೆಡ್ ಹಾಕಿಕೊಂಡು ವಾಸ ಮಾಡುತ್ತಿದ್ದೇನೆ ಎಂದು ಕೆಲವರು ಸುಳ್ಳು ಆರೋಪ ಮಾಡಿದ್ದಾರೆ. ಆದರೆ, ಎಲ್.ಆರ್.ನಗರದಲ್ಲಿ ಮಗನ ಸ್ವಂತ ಮನೆ ಇದೆ. ಮಗನ ಮನೆ ಚಿಕ್ಕದಾಗಿರುವುದರಿಂದ ನಾನು ಇಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡಿದ್ದೇನೆ. ಹೀಗಾಗಿ ಸರ್ಕಾರ ನನಗೆ ಮನೆ ನಿರ್ಮಿಸಿಕೊಡುವ ಅಗತ್ಯವಿಲ್ಲ' ಎಂದು ವೈಲೆಟ್ ಎಂಬುವರು ಹೇಳಿದರು.

ಪ್ರತಿಕ್ರಿಯಿಸಿ (+)