ಶುಕ್ರವಾರ, ಮೇ 27, 2022
28 °C

ಮನೆ ಬಾಡಿಗೆ: ಮುಂಜಾಗ್ರತೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ಹೊರವಲಯದಲ್ಲಿ ಹೊರ ರಾಜ್ಯದ ಕೆಲವರು ಬಂದು ಮನೆ ಬಾಡಿಗೆ ತೆಗೆದುಕೊಂಡು ಕಳ್ಳತನದಂತಹ ಕಾನೂನು ಬಾಹಿರ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಆದ್ದರಿಂದ ಮನೆ ಬಾಡಿಗೆ ನೀಡುವಾಗಿ ಕೆಳಕಂಡ ಅಂಶಗಳನ್ನು ಪರಿಶೀಲಿಸಿ, ಬಾಡಿಗೆ ಕೊಡಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.ಅಪರಿಚಿತರಿಗೆ ಬಾಡಿಗೆಗೆ ಮನೆ ನೀಡುಗಾವ ಅವರ ಹೆಸರು, ವಿಳಾಸ, ಭಾವಚಿತ್ರ ಹಾಗೂ ಅವರ ಗುರುತಿನ ಚೀಟಿ ಪಡೆದುಕೊಳ್ಳಬೇಕು. ಬಾಡಿಗೆ ಇದ್ದವರ ವಿವರಗಳನ್ನು ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.ನಗರದ ಹೊರವಲಯದಲ್ಲಿ ರಾತ್ರಿ ವೇಳೆ ಯಾರಾದರೂ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡು ಬಂದರೆ ಅಥವಾ ವಾಹನ ಚಲನವಲನ ಕಂಡು ಬಂದರೆ ಸಂಬಂಧಿಸಿದ ಠಾಣೆಗೆ ಮಾಹಿತಿ ನೀಡಬೇಕು. ಹಗಲು ಅಥವಾ ರಾತ್ರಿ ಹೊತ್ತಿನಲ್ಲಿ ಮನೆಗೆ ಕೀಲಿ ಹಾಕಿ ಸಂತೆ, ಶಾಲೆ ಇನ್ನಿತರೆಡೆಗೆ ಹೋಗುವವರು ಪಕ್ಕದ ಮನೆಯವರಿಗೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಯವರಿಗೆ ಮಾಹಿತಿ ನೀಡಬೇಕು.ಈ ಮೂಲಕ ಕಳ್ಳತನ ಪ್ರಕರಣ ತಪ್ಪಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.