ಬುಧವಾರ, ನವೆಂಬರ್ 20, 2019
25 °C

ಮನೆ ಮನೆಗೆ `ಮಯ್ಯಾಸ್'

Published:
Updated:
ಮನೆ ಮನೆಗೆ `ಮಯ್ಯಾಸ್'

ಆಹಾರ ಉದ್ಯಮದಲ್ಲಿ ಹೊಸ ಪ್ರಯೋಗ ಮಾಡುತ್ತಿರುವ  ಡಾ.ಪಿ. ಸದಾನಂದ ಮಯ್ಯ ಅವರು ಈಗ `ಮನೆ ಮನೆಗೆ ಮಯ್ಯೊಸ್' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ, ಬೆಮೆಲ್ ಲೇಔಟ್, ಇಟ್ಟುಮಡು, ಚಂದ್ರಾ ಲೇಔಟ್ ಮತ್ತು ಬ್ಯಾಟರಾಯನಪುರ ಬಡಾವಣೆಗಳಲ್ಲಿ ಈ ತಿಂಗಳ ಎರಡನೇ ವಾರದಿಂದ ಈ ಕಾರ್ಯಕ್ರಮ ಆರಂಭಗೊಳ್ಳಲಿದೆ.ದಕ್ಷಿಣ ಭಾರತದ ಆಹಾರಗಳಾದ ಇಡ್ಲಿ, ವಡೆ, ದೋಸೆ, ನಿಪ್ಪಟ್ಟು, ಕೋಡುಬಳೆ, ಚಕ್ಕುಲಿ, ಮಂಗಳೂರು ಬಜ್ಜಿ ಮತ್ತಿತರ 30ಕ್ಕೂ ಹೆಚ್ಚು ಪ್ರಕಾರಗಳನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸುವ ಸುಲಭೋಪಾಯವನ್ನು `ಮನೆ ಮನೆಗೆ ಮಯ್ಯೊಸ್' ಕಾರ್ಯಕ್ರಮದಲ್ಲಿ ವಿವರಿಸಲಾಗುವುದು.ಕಿರುತೆರೆ ಕಲಾವಿದೆ ಸುನೇತ್ರಾ ಪಂಡಿತ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬಡಾವಣೆಯ ಒಂದು ಮನೆಯಲ್ಲಿ ಅಲ್ಲಿಯ ಆಸಕ್ತ ನಿವಾಸಿಗಳನ್ನು ಆಹ್ವಾನಿಸಿ ಅವರಿಗೆ ಪ್ರಾತ್ಯಕ್ಷಿಕೆ ನೀಡುವುದರ ಜತೆಗೆ ಮಯ್ಯೊಸ್ ಆಹಾರೋತ್ಪನ್ನಗಳನ್ನು ಸವಿಯಲು ನೀಡಲಾಗುತ್ತದೆ. ಪ್ರತಿದಿನ ಎರಡು ಪ್ರದರ್ಶನಗಳು ಬೆಳಗ್ಗೆ 11 ಮತ್ತು ಸಂಜೆ 4 ಗಂಟೆಗೆ ಪ್ರದರ್ಶಿತವಾಗಲಿವೆ.ಮಯ್ಯೊಸ್ ಆಹಾರ ತಯಾರಿಕಾ ಘಟಕದ ಸಾಕ್ಷ್ಯಚಿತ್ರವನ್ನು ಇದೇ ಸಂದರ್ಭದಲ್ಲಿ ತೋರಿಸಲಾಗುವುದು. ಆಧುನಿಕ ತಂತ್ರಜ್ಞಾನ ಮತ್ತು ಪ್ರಯೋಗಗಳಿಂದ ಕೂಡಿದ ಈ ಘಟಕವನ್ನು ಆಸಕ್ತ ಮಹಿಳಾ ಸಂಘಗಳು ತಮ್ಮ ಸದಸ್ಯರೊಂದಿಗೆ ನೋಡಬಹುದಾಗಿದೆ.`ಮನೆ ಮನೆ ಮಯ್ಯೊಸ್'ನಲ್ಲಿ ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರ ಪಾತ್ರವೂ ಇದೆ. ಸರದೇಶಪಾಂಡೆ ನೇತೃತ್ವದಲ್ಲಿ `ಮಯ್ಯೊಸ್ ರಂಗಾವಳಿ' ರೂಪುಗೊಂಡಿದೆ. `ಆಲ್ ದಿ ಬೆಸ್ಟ್', `ರಾಶಿಚಕ್ರ' ಮತ್ತಿತರ ನಗೆ ನಾಟಕಗಳ ಜತೆಗೆ ಮಯ್ಯೊಸ್ ಆರೋಗ್ಯಕರ ಆಹಾರ ಸವಿಯಬಹುದು. ಆಸಕ್ತರು ತಮ್ಮ ಬಡಾವಣೆಗಳಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಸನ್ನದತ್ತ (85488 67801) ಅವರನ್ನು ಸಂಪರ್ಕಿಸಬಹುದು.

 

ಪ್ರತಿಕ್ರಿಯಿಸಿ (+)