ಶುಕ್ರವಾರ, ನವೆಂಬರ್ 22, 2019
23 °C
ಅಕ್ರಮ ಮದ್ಯ: ಮಾಹಿತಿದಾರರಿಗೆ ರೂ.50 ಸಾವಿರ ಬಹುಮಾನ

ಮನೆ ಮಾಲೀಕರ ಮೇಲೆ ಗೂಂಡಾ ಕಾಯ್ದೆ

Published:
Updated:

ತುಮಕೂರು: ಜಿಲ್ಲೆಯಲ್ಲಿ ನಕಲಿ ಮದ್ಯ ತಯಾರಿಸಿ, ಸಾಗಣೆ ಮಾಡುವವರು ಹಾಗೂ ಸಂಗ್ರಹಿಸುವ ಮನೆ ಮಾಲೀಕರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು. ಆರೋಪಿಯನ್ನು ಮಾಲು ಸಮೇತ ಹಿಡಿದುಕೊಟ್ಟವರಿಗೆ ರೂ. 50 ಸಾವಿರ ಬಹುಮಾನ ನೀಡಲಾಗುವುದು ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು 898 ಕಡೆ ದಾಳಿ ನಡೆಸಿ, 56 ಮೊಕದ್ದಮೆ ದಾಖಲಿಸಿದ್ದಾರೆ. 18 ನಿಯಮ ಉಲ್ಲಂಘನೆ ಮೊಕದ್ದಮೆ ದಾಖಲಿಸಿ, 46 ಆರೋಪಿಗಳನ್ನು ಬಂಧಿಸಿದ್ದಾರೆ. 1403 ಲೀಟರ್ ಮದ್ಯ ಮತ್ತು 26 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದಾರೆ. 5 ವಾಹನ ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಶಿರಾದ ಶ್ರೀದೇವಿ ವೈನ್ಸ್‌ಗೆ ಸೇರಿದ ಮರಳಿನಲ್ಲಿ ಹೂತಿಟ್ಟ್ದ್ದಿದ 53 ರಟ್ಟಿನ ಪೆಟ್ಟಿಗೆಗಳ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಹಂಚಿಕೆ ಮಾಡಲು ಕೊಂಡೊಯ್ಯುತ್ತಿದ್ದ ಪಾವಗಡ ತಾಲ್ಲೂಕಿನ ರವಿ ವೈನ್ಸ್‌ಗೆ ಸೇರಿದ 24 ಬಾಕ್ಸ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಮಾಲೀಕರ ವಿರುದ್ಧ ದೂರು ದಾಖಲಿಸಿದ್ದು, ಅಂಗಡಿಗಳ ಲೈಸನ್ಸ್ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.ದೂರು ನೀಡಲು ಸಾರ್ವಜನಿಕರು ಮೊಬೈಲ್‌ಗೆ 9449597050ಗೆ ಮಾಹಿತಿ ನೀಡಬಹುದು.

ಪ್ರತಿಕ್ರಿಯಿಸಿ (+)