ಮನೆ ಮುಂದೆ ತಲೆಬುರುಡೆ!

7

ಮನೆ ಮುಂದೆ ತಲೆಬುರುಡೆ!

Published:
Updated:

ರಾಯಚೂರು: ಇಲ್ಲಿನ ಗಂಗಾನಿವಾಸದ ಬಡಾವಣೆಯ ಮನೆಯೊಂದರ ಮುಂದೆ ತಲೆ ಬುರುಡೆ ಇಟ್ಟು ಅದಕ್ಕೆ ಅರಿಷಿಣ ಕುಂಕುಮ ಹಾಕಿ ಮಾಟ ಮಂತ್ರದ ಭಯ ಹುಟ್ಟಿಸುವ ಘಟನೆ ನಡೆದಿದೆ.ಗಂಗಾನಿವಾಸ ಬಡಾವಣೆಯ ನಿವಾಸಿಗಳಾದ ಅಮರೇಶ ಮತ್ತು ಲಕ್ಷ್ಮಣ ಎಂಬುವವರ ಮನೆ ಮುಂದೆ ಈ ತಲೆ ಬರುಡೆ ಇಟ್ಟು ಮಾಟ ಮಂತ್ರ ಭಯ ಹುಟ್ಟಿಸುವ ಯತ್ನ ನಡೆದಿದೆ.ಬಡಾವಣೆ ಜನರಂತೆ ಸೋಮವಾರ ಬೆಳಿಗ್ಗೆ ಎದ್ದ ಅಮರೇಶ ಮತ್ತು ಲಕ್ಷ್ಮಣ ಮನೆಯರು ಮನೆ ಬಾಗಿಲು ತೆರೆದಾಗ ಮನೆ ಮುಂದೆ ಕಂಡಿದ್ದು ತಲೆ ಬುರುಡೆ! ಹೌಹಾರಿ ಆಕ್ರೋಶ ವ್ಯಕ್ತಪಡಿಸಿದಾಗ ಬಡಾವಣೆಯಲ್ಲಿ ನಿವಾಸಿಗಳು, ದಾರಿ ಹೋಕರು ಸೇರಿ ಜನ ಜಾತ್ರೆ ಸೇರಿತ್ತು.ಯಾರು ಈ ಕೃತ್ಯ ಎಸಗಿದವರು, ಯಾತಕ್ಕಾಗಿ ಹೀಗೆ ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ ಎಂದು ಚಿಂತೆ ಮಾಡಿದ ಮನೆಯವರು ಕೊನೆಗೆ ಇದು ಆಸ್ತಿ ವಿಷಯ ಕುರಿತು ಸಹೋದರಿಯ ಪತಿ ಎಸಗಿದ ಕೃತ್ಯ ಎಂದು ತಿಳಿದು ಪೊಲೀಸ್ ಠಾಣೆ ಮೆಟ್ಟಿಲು ಏರಿದರು.

ಸದರ ಬಜಾರ ಠಾಣೆಗೆ ತೆರಳಿದಾಗ ಅಲ್ಲಿ ಈ ಬಗ್ಗೆ ವಿಚಾರಣೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಕುಟುಂಬದವರೊಳಗಿನ ಜನಗಳ ವಿಚಾರಣೆ ಮಾಡಿ ತಿಳಿವಳಿಕೆ ಹೇಳಿ ಕಳುಹಿಸಲಾಗಿದೆ ಎಂದು ಸದರ ಬಜಾರ ಠಾಣೆ ಇನ್ಸಪೆಕ್ಟರ್ ದಯಾನಂದ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry