ಮನೆ ಮುಂದೆ ವಾಹನ ನಿಲುಗಡೆ ಬೇಡ

7

ಮನೆ ಮುಂದೆ ವಾಹನ ನಿಲುಗಡೆ ಬೇಡ

Published:
Updated:

ನಗರದ ಅನೇಕ ಬಡಾವಣೆಗಳಲ್ಲಿ ತಮ್ಮ ಮನೆ ಮುಂದೆಯೇ ವಾಹನಗಳನ್ನು ನಿಲ್ಲಿಸುತ್ತಾರೆ. ಹೀಗೆ ಎರಡೂ ಕಡೆ ವಾಹನ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತದೆ.ಇನ್ನು ಕೆಲವರು ತಮ್ಮ ದ್ವಿಚಕ್ರ ವಾಹನಗಳನ್ನು ಅಲ್ಲಲ್ಲಿ ಪಾದಚಾರಿಗಳ ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಇದರಿಂದ ಪಾದಚಾರಿಗಳಿಗೆ ವಿಪರೀತ ತೊಂದರೆಯಾಗುತ್ತದೆ.“ನೋ ಪಾರ್ಕಿಂಗ್‌” ಬೋರ್ಡುಗಳನ್ನು ಯಾರೂ ಗಮನಕ್ಕೇ ತೆಗೆದುಕೊಳ್ಳದೆ ಆ ಬೋರ್ಡುಗಳ ಎದುರೇ ವಾಹನಗಳನ್ನು ನಿಲ್ಲಿಸುತ್ತಾರೆ. ದಯಮಾಡಿ ರಸ್ತೆಗಳಲ್ಲಿ ಹಾಗೂ ಪಾದಚಾರಿ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕೊಡದೆ ಕಟ್ಟುನಿಟ್ಟಿನ ಕ್ರಮದಿಂದ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡುವ ಕೃಪೆ ಮಾಡಬೇಕೆಂದು ವಿನಂತಿಸುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry