ಶುಕ್ರವಾರ, ಜೂನ್ 18, 2021
24 °C

ಮಮತಾಗೆ ಬೆಂಬಲ , ಅವರ ಪಕ್ಷಕ್ಕಲ್ಲ : ಅಣ್ಣಾ ಹಜಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎರಡು ದಿನಗಳ ಹಿಂದೆ ಆಯೋಜಿಸಿದ್ದ  ಸಮಾವೇಶದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸಾಮಾಜಿಕ ಸೇವಾಕರ್ತ ಅಣ್ಣಾ ಹಜಾರೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದು ತಾವು ಮಮತಾ ಬ್ಯಾನರ್ಜಿಗೆ ಮಾತ್ರ ಬೆಂಬಲ ನೀಡುತ್ತಿದ್ದು ಅವರ ಪಕ್ಷಕ್ಕಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ, ಅವರು ದೇಶದ ಉತ್ತಮ ಮುಖ್ಯಮಂತ್ರಿ. ಆಗಾಗಿ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತೇನೆ, ಯಾವುದೇ ರಾಜಕೀಯ ಪಕ್ಷಗಳಿಗಲ್ಲ ಎಂದು ಅಣ್ಣಾ ಹಜಾರೆ ತಿಳಿಸಿದರು.ಅವರ ಒಳ್ಳೆಯ ನಡವಳಿಕೆ, ತ್ಯಾಗ, ಉತ್ತಮ ಆಡಳಿತಕ್ಕೆ ನನ್ನ ಬೆಂಬಲವೇ ಹೊರತು ಅವರ ಪಕ್ಷಕ್ಕೆ ಅಲ್ಲ ಎಂದು ಅಣ್ಣಾ ಹಜಾರೆ ಪುನರುಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.