ಮಮತಾ ಕಲಾಕೃತಿ: 1 ಕೋಟಿ ಸಂಗ್ರಹ

7

ಮಮತಾ ಕಲಾಕೃತಿ: 1 ಕೋಟಿ ಸಂಗ್ರಹ

Published:
Updated:
ಮಮತಾ ಕಲಾಕೃತಿ: 1 ಕೋಟಿ ಸಂಗ್ರಹ

ಕೋಲ್ಕತ್ತ (ಪಿಟಿಐ): ರೈಲ್ವೆ ಸಚಿವೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ರಚಿಸಿದ್ದ 95 ಕಲಾಕೃತಿಗಳು ಕೇವಲ ಮೂರು ದಿನಗಳಲ್ಲಿ ಕೋಟಿ ರೂಪಾಯಿಗೂ ಹೆಚ್ಚಿನ ಹಣ ತಂದುಕೊಟ್ಟಿವೆ. ಖಾಸಗಿ ಕಲಾ ಗ್ಯಾಲರಿಯಲ್ಲಿ ಸೋಮವಾರದಿಂದ ಬುಧವಾರದವರೆಗೆ ನಡೆದ ಮಮತಾ ಅವರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಕಲಾಕೃತಿಗಳ ಮಾರಾಟದಿಂದ ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಂಗ್ರಹವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಇದರಿಂದ ತುಂಬಾ ಖುಷಿಗೊಂಡಿರುವ ಮಮತಾ ದೀದಿ, ಇನ್ನಷ್ಟು ಕೃತಿಗಳನ್ನು ರಚಿಸಿ ಪಕ್ಷದ ನಿಧಿ ಸಂಗ್ರಹಕ್ಕಾಗಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry