ಮಮತಾ ಮಾರ್ಗದಲ್ಲಿ ಸಾಗಲಿರುವ ಕರುಣಾ

7

ಮಮತಾ ಮಾರ್ಗದಲ್ಲಿ ಸಾಗಲಿರುವ ಕರುಣಾ

Published:
Updated:

ಚೆನ್ನೈ (ಪಿಟಿಐ): ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಶನಿವಾರವಷ್ಟೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹಾದಿಯಲ್ಲಿಯೇ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರೂ ಸಾಗಲಿದ್ದಾರೆ.

 
ಬೆಲೆ ಪರಿಷ್ಕರಣೆ?

ನವದೆಹಲಿ: ಪೆಟ್ರೋಲ್ ಬೆಲೆ ಏರಿಕೆಗೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದೊಳಗೆ ಬೆಲೆ ಪರಿಷ್ಕರಣೆಯಾಗುವ ಸಾಧ್ಯತೆ ಕಂಡುಬಂದಿದೆ.

`ಕಳೆದ 14 ದಿನಗಳಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ನಾವು ಪೆಟ್ರೋಲ್ ಬೆಲೆ ಪರಿಷ್ಕರಿಸಲು ಚಿಂತನೆ ನಡೆಸಿದ್ದೇವೆ~ ಎಂದು ಪ್ರಮುಖ ತೈಲ ಕಂಪೆನಿಯೊಂದು `ಪ್ರಜಾವಾಣಿ~ಗೆ ತಿಳಿಸಿದೆ.ಕೇಂದ್ರ ಸರ್ಕಾರವು ಏಕಾಏಕಿ ಭಾರಿ ಪ್ರಮಾಣದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ 88 ವರ್ಷದ ಡಿಎಂಕೆ ಮುಖ್ಯಸ್ಥ, ಇದೇ 30ರಂದು ನಡೆಯಲಿರುವ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ.ಬಂದ್: ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ತ್ರಿಪುರಾದ ಆಡಳಿತಾರೂಢ ಎಡರಂಗ ಸರ್ಕಾರ ಇದೇ 31ರಂದು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದೆ.ಶನಿವಾರ ನಡೆದ ಎಡರಂಗದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಸಂಚಾಲಕ ಬಿಜನ್ ಧಾರ್ ತಿಳಿಸಿದ್ದಾರೆ.ಅಧಿವೇಶನ ಮುಗಿದ ಕೂಡಲೇ  ಪೆಟ್ರೋಲ್ ಬೆಲೆ ಹೆಚ್ಚಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು  ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry