ಬುಧವಾರ, ಏಪ್ರಿಲ್ 14, 2021
24 °C

ಮಮ್ಮಿ ನಂ.1

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಮ್ಮಿ ನಂ.1

ವರ್ಷದ ಹಿಂದೆ `ಡ್ಯಾಡಿ ನಂ1~ ಎಂಬ ಗೇಮ್ ಶೋ ನಡೆಸಿದ್ದ ಝೀ ಕನ್ನಡ ವಾಹಿನಿ `ಮಮ್ಮಿ ನಂ.1~ ಎಂಬ ಹೊಸ ಗೇಮ್ ಶೋ ಕಾರ್ಯಕ್ರಮ ಆರಂಭಿಸುತ್ತಿದೆ. ನ.17ರಿಂದ ಶುರುವಾಗುವ ಈ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10 ಗಂಟೆವರೆಗೆ ಪ್ರಸಾರವಾಗಲಿದೆ.`ಮಜಾ ವಿಥ್ ಸೃಜಾ~ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ನಟ ಸೃಜನ್ ಲೋಕೇಶ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ನಿರ್ಮಾಣದ ಹೊಣೆ ಹೊತ್ತುಕೊಂಡಿರುವುದು ನಟಿ, ನಿರೂಪಕಿ ವರ್ಷಾ.`ಒಟ್ಟು 25 ಕಂತುಗಳು ಪ್ರಸಾರವಾಗಲಿದ್ದು ಪ್ರತಿ ಕಂತಿನಲ್ಲಿಯೂ ಒಬ್ಬೊಬ್ಬರು `ಮಮ್ಮಿ ನಂ 1~ ಪಟ್ಟ ಪಡೆದುಕೊಳ್ಳುತ್ತಾರೆ. ಅಲ್ಲದೆ ಸೋತವರೂ ಕಾರ್ಯಕ್ರಮದುದ್ದಕ್ಕೂ ಅದರಲ್ಲಿ ಪಾಲ್ಗೊಳ್ಳುತ್ತಾರೆ. ತಾಯಿ ಮತ್ತು ಮಕ್ಕಳ ನಡುವಿನ ಅನುಬಂಧವನ್ನು ಬಿಂಬಿಸುವ ಕಾರ್ಯಕ್ರಮವಿದು. ಮನರಂಜನೆಯೇ ಇದರ ಪ್ರಮುಖ ಉದ್ದೇಶ.ಎಲ್ಲಾ ವರ್ಗದ ಮಹಿಳೆಯರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಮಕ್ಕಳಿಗೆ 8-12 ವರ್ಷದ ಮಿತಿ ಇದೆ. ಸೋತವರ ದುಃಖವನ್ನು ತೋರಿಸುವ, ಅಳಿಸುವ ಯಾವುದೇ ಸನ್ನಿವೇಶಗಳು ಇದರಲ್ಲಿರುವುದಿಲ್ಲ~ ಎಂದು ಸೃಜನ್ ಲೋಕೇಶ್ ಹೇಳಿದರು.ಕಾರ್ಯಕ್ರಮದಲ್ಲಿ ಆಡಿಸುವ ಆಟಗಳು ವೈಜ್ಞಾನಿಕ ಸಂಗತಿಗಳ ಅನ್ವಯ ರೂಪಿತವಾಗಿದ್ದು, ಜೊತೆಗೆ ಸಂದೇಶವನ್ನೂ ನೀಡುತ್ತವೆ. ಕಾರ್ಯಕ್ರಮದಲ್ಲಿ ಗೆಲ್ಲುವವರಿಗೆ ಮಾತ್ರವಲ್ಲ, ಭಾಗವಹಿಸಿದವರಿಗೂ ಬಹುಮಾನ ಇರುತ್ತದೆ, ಮಕ್ಕಳಿಗೆ ಸ್ಕಾಲರ್‌ಶಿಪ್ ಸಹ ನೀಡಲಾಗುವುದು ಎಂದು ವಾಹಿನಿಯ ನಾನ್ ಫಿಕ್ಷನ್ ವಿಭಾಗದ ಮುಖ್ಯಸ್ಥ ಬಾಲು ತಿಳಿಸಿದರು.ನಿರ್ಮಾಪಕಿ ವರ್ಷಾ, ಕಾರ್ಯಕ್ರಮದ ನಿರ್ದೇಶಕ ತ್ಯಾಗಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.