ಮರಕ್ಕೆ ಟಂ ಟಂ ಡಿಕ್ಕಿ: 11 ಮಂದಿಗೆ ಗಾಯ

7

ಮರಕ್ಕೆ ಟಂ ಟಂ ಡಿಕ್ಕಿ: 11 ಮಂದಿಗೆ ಗಾಯ

Published:
Updated:

ಕೆರೂರ: ಸಂಜೆ ಟಂ ಟಂ ವಾಹನ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 11 ಜನರು ಗಾಯಗೊಂಡ ಘಟನೆ ಹಂಗರಗಿ ಗ್ರಾಮದ ಕಟಗೇರಿ ಕ್ರಾಸ್ ಬಳಿ ಸೋಮವಾರ ಸಂಭವಿಸಿದೆ.ಗುಳೇದಗುಡ್ಡದಿಂದ ಕಟಗೇರಿ ಮಾರ್ಗವಾಗಿ ಬೀಳಗಿಗೆ ಹೊರಟಿದ್ದ ಈ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಹೊಡೆದ ಪರಿಣಾಮ ಗುಳೇದಗುಡ್ಡದ 11 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಮಹಿಳೆ ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪಿ.ಎಸ್.ಐ ಎಸ್.ಎಸ್. ಸೀಮಾನಿ ಹಾಗೂ ಸಿಬ್ಬಂದಿ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಕೆರೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry