ಭಾನುವಾರ, ಜನವರಿ 19, 2020
27 °C
ಹೈಕೋರ್ಟ್ ಆದೇಶದ ಉಲ್ಲಂಘನೆ

ಮರಗಳಿಗೆ ಬಿಬಿಎಂಪಿ ಕೊಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ವರ್ಷ ಬಿಬಿಎಂಪಿ­ಯು 3,000 ಮರಗಳನ್ನು ಧರೆಗುರು­ಳಿಸಿದೆ. ಅವುಗಳಲ್ಲಿ ಬಹುತೇಕ ಮರಗ­ಳಿಗೆ ತಡರಾತ್ರಿಯಲ್ಲಿ ಕೊಡಲಿ ಹಾಕಲಾ­ಗಿದೆ. ಆದರೆ ಹೊಸದಾಗಿ ಒಂದೂ ಸಸಿಗಳನ್ನು ನೆಡುವ ಕೆಲಸ ಮಾಡಿಲ್ಲ.ಕರ್ನಾಟಕ ವೃಕ್ಷ ರಕ್ಷಣಾ ಕಾಯಿದೆ 1976ರ 14ನೇ ಸೆಕ್ಷನ್‌ನ  ಅಡಿ ನಗರದ ವೃಕ್ಷಗಳ ಮೇಲ್ವಿಚಾರಣೆಗೆ ಸ್ವತಂತ್ರ ಪ್ರಾಧಿಕಾರವನ್ನು ಮರು ರಚಿಸ­ಬೇಕು ಹಾಗೂ ಪಾಲಿಕೆ ಸದಸ್ಯರನ್ನು ಅದರಿಂದ ಹೊರಗಿಡಬೇಕು ಎಂದು  ಬಿಬಿಎಂಪಿಗೆ ನಿರ್ದೇಶಿಸಿ 2012ರ ನವೆಂಬರ್‌ನಲ್ಲಿ ಹೈಕೋರ್ಟ್ ಆದೇಶ ಹೊರಡಿಸಿತ್ತು.ಹೊಸ ಪ್ರಾಧಿಕಾರ ರಚಿಸುವವರೆಗೂ ಮರಗಳನ್ನು ಕಡಿಯಲು ಅನುಮತಿ ನೀಡ­ಲು ಪಾಲಿಕೆಗೆ ಯಾವುದೇ ಅಧಿಕಾರವಿಲ್ಲ ಎಂದು ಆದೇಶವು ಸ್ಪಷ್ಟಪಡಿಸುತ್ತದೆ.  ಪ್ರಾಧಿಕಾರದ ರಚನೆಗೆ ಪಾಲಿಕೆ ಮುಂ­ದಾ­ಗದಿದ್ದರೂ ನಿಯಮ ಬಾಹಿರ­ವಾಗಿ  ಮರಗಳನ್ನು ಕಡಿಯುತ್ತಿದೆ. ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು, ‘ಸಸಿ­ಗ­ಳನ್ನು ನೆಡುವುದರ ಹೊರತಾಗಿ ಮರಗಳ ಶಿಥಿಲಗೊಂಡ ಭಾಗಗಳನ್ನು ತೆರವುಗೊಳಿ­ಸು­ವುದಷ್ಟೇ ಪಾಲಿಕೆಯ ಅರಣ್ಯ ವಿಭಾಗದ ಪ್ರಮುಖ ಕೆಲಸ. ಪ್ರಾಧಿ­ಕಾರದ ರಚನೆಯಾದರೆ ವಿಭಾಗಕ್ಕೆ ಯಾವುದೇ ಕೆಲಸವಿರುವುದಿಲ್ಲ. ಆದ್ದ­ರಿಂದ ಪಾಲಿಕೆ ಆಧಿಕಾರಿಗಳು ಪ್ರಾಧಿ­ಕಾರದ ರಚನೆಯನ್ನು ನಿರ್ಲಕ್ಷಿಸಿದ್ದಾರೆ’ ಎಂದು ಹೇಳಿದರು.ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ‘ ವಿಷಯದ ಬಗ್ಗೆ ನನಗೆ ತಿಳಿದಿದೆ. ಆದರೆ ನನ್ನ ಬಳಿಗೆ ಕಡತ ಬಂದಿಲ್ಲ. ಸೋಮವಾರ ಈ ಬಗ್ಗೆ ಗಮ­ನಹರಿಸಿ ಶೀಘ್ರದಲ್ಲಿ ಸಭೆ ಕರೆಯು­ತ್ತೇನೆ’ ಎಂದರು. ಪಾಲಿಕೆ ಆಯುಕ್ತ ಎಂ. ಲಕ್ಷೀನಾರಾಯಣ, ‘ಪ್ರಾಧಿ­­ಕಾರದ  ಬಗ್ಗೆ  ಪಾಲಿಕೆಯು ಇನ್ನೂ ಗಮನಹರಿಸಿಲ್ಲ’ ಎಂದು ಸ್ಪಷ್ಟಪಡಿ­ಸಿದರು.

ಪ್ರತಿಕ್ರಿಯಿಸಿ (+)