ಮರದ ಕೊಂಬೆ ಬಿದ್ದು ಸಾವು

ಮಂಗಳವಾರ, ಜೂಲೈ 23, 2019
20 °C

ಮರದ ಕೊಂಬೆ ಬಿದ್ದು ಸಾವು

Published:
Updated:

ನರಸಿಂಹರಾಜಪುರ: ಮರದ ಕೊಂಬೆಯೊಂದು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲ್ಲೂಕಿನ ಮಲ್ಲಂದೂರು ಗ್ರಾಮದ ಕಡೆಗದ್ದೆ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.ತಾಲ್ಲೂಕಿನ ಕಡೆಗದ್ದೆಯ ನಿವಾಸಿ ಕೃಷ್ಣನಾಯಕ್ ಅಲಿಯಾಸ್ ಕೃಷ್ಣಪ್ಪ(48) ಮೃತಪಟ್ಟ ದುರ್ದೈವಿ. ಕೃಷ್ಣನಾಯಕ್ ಬುಧವಾರ ಸಂಜೆ ವೇಳೆ ಮರದ ಕೊಂಬೆಯೊಂದು ಇವರ ಮೇಲೆ ಬಿದ್ದ ಪರಿಣಾಮವಾಗಿ ತೀವ್ರಗಾಯಗೊಂಡಿದ್ದರು. ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry