ಬುಧವಾರ, ನವೆಂಬರ್ 13, 2019
23 °C
ಮಾಡಿ ನಲಿ ಸರಣಿ 11

ಮರದ ಬುಡದಲ್ಲೇಕೆ ತಂಪು?

Published:
Updated:
ಮರದ ಬುಡದಲ್ಲೇಕೆ ತಂಪು?

ಸಾಮಗ್ರಿಗಳು:  ಅರಳಿ ಮರದ 4 ತಾಜಾ ಎಲೆಗಳು, ದಾರ, ಸ್ಟ್ಯಾಂಡ್, ಹರಳೆಣ್ಣೆ.ವಿಧಾನ

1. ಒಂದೇ ಗಾತ್ರದ ನಾಲ್ಕು ತಾಜಾ ಅರಳಿ ಎಲೆಗಳನ್ನು ತೆಗೆದುಕೊಳ್ಳಿ.

2. ಚಿತ್ರದಲ್ಲಿ ತೋರಿಸಿದಂತೆ ಅವುಗಳನ್ನು ದಾರದಿಂದ ಕಟ್ಟಿ, ದಾರದ ತುದಿಗಳನ್ನು ಸ್ಟ್ಯಾಂಡಿಗೆ  ಕಟ್ಟಿ.

3. ಎಲೆಗಳಿಗೆ `ಅ' `ಬ' `ಕ' `ಡ' ಎಂದು ಹೆಸರಿಸಿ.

4.`ಬ' ಎಲೆಯ ತಳಭಾಗಕ್ಕೆ, `ಕ' ಎಲೆಯ ಮೇಲ್ಬಾಗಕ್ಕೆ ಹಾಗೂ  `ಡ' ಎಲೆಯ ಎರಡೂ ಬದಿಗೆ ಹರಳೆಣ್ಣೆಯನ್ನು ಸರಿಯಾಗಿ ಸವರಬೇಕು. `ಅ' ಎಲೆಯ ಯಾವ ಭಾಗಕ್ಕೂ ಹರಳೆಣ್ಣೆ ಸವರಬೇಡಿ.ಪ್ರಶ್ನೆ:  5-6 ದಿನಗಳ ನಂತರ ಎಲ್ಲ ಎಲೆಗಳನ್ನೂ ಪರೀಕ್ಷಿಸಿ. ಎಲೆಗಳಲ್ಲಾದ ಬದಲಾವಣೆಗೆ ಕಾರಣವೇನು?

ಉತ್ತರ: `ಅ' ಮತ್ತು  `ಕ' ಎಲೆಗಳು ಬಾಡುತ್ತವೆ. ಯಾಕೆಂದರೆ ಎಲೆಯ ಕೆಳಗಿನ ಭಾಗದಲ್ಲಿ ಹೆಚ್ಚು ಪತ್ರ ರಂಧ್ರಗಳಿದ್ದು, ಅವುಗಳಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಾಷ್ಪ ವಿಸರ್ಜನೆಯಾಗುತ್ತದೆ. `ಬ' ಎಲೆಯಲ್ಲಿಯ ಹೆಚ್ಚು ಪತ್ರ ರಂಧ್ರಗಳನ್ನು ಮತ್ತು  `ಡ' ಎಲೆಯ ಎಲ್ಲ ಪತ್ರ ರಂಧ್ರಗಳನ್ನೂ ಹರಳೆಣ್ಣೆ ಸವರಿ ಬಂದ್ ಮಾಡಿರುವುದರಿಂದ ಬಾಷ್ಪ ವಿಸರ್ಜನೆ ಆಗುವುದಿಲ್ಲ. ಆದ್ದರಿಂದ ಅವು ಒಣಗದೆ ಹಾಗೆಯೇ ಉಳಿಯುತ್ತವೆ. ಬಾಷ್ಪ ವಿಸರ್ಜನೆಯು ಸಸ್ಯದಲ್ಲಿ ನೀರು ಮೇಲೇರಲು, ವಾತಾವರಣವನ್ನು ತಂಪಾಗಿಡಲು ಹಾಗೂ ಭೂಮಿಯಿಂದ ಲವಣಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಪ್ರತಿಕ್ರಿಯಿಸಿ (+)