ಶುಕ್ರವಾರ, ಮೇ 27, 2022
24 °C

ಮರದ ರೆಂಬೆ ಕೊಂಬೆಗಳನ್ನು ಕತ್ತರಿಸಿ

-ಜೆ.ಆರ್. ಆದಿನಾರಾಯಣಮುನಿ Updated:

ಅಕ್ಷರ ಗಾತ್ರ : | |

ರಾಜಾಜಿನಗರದ ನವರಂಗ್ ವೃತ್ತದ ಮೇಲ್ಭಾಗದ ಗೋಕುಲ ಹೋಟೆಲ್‌ನಿಂದ ಒಂದನೇ ಬ್ಲಾಕ್‌ವರೆಗೆ ಹೋಗುವ ರಸ್ತೆಯ ಎರಡೂ ಕಡೆಗಳಲ್ಲಿ ಗಿಡ-ಮರಗಳ ರೆಂಬೆ ಕೊಂಬೆಗಳು ಸುಮಾರು ಐದಾರು ಅಡಿಗಳವರೆಗೆ ಪಸರಿಸಿದ್ದು, ಪಾದಚಾರಿ ರಸ್ತೆ ಹಾಗೂ ಸೈಕಲ್ ಸವಾರರ ರಸ್ತೆಯವರೆಗೂ ಹರಡಿವೆ.

ಇದರಿಂದ ಹಿಂದೆ ಅಥವಾ ಮುಂದೆ ಬರುವ ವಾಹನಗಳು ಸರಿಯಾಗಿ ಕಾಣಿಸದೆ ವಾಹನಗಳ ಛಾವಣಿಗಳಿಗೂ ತಗುಲಿ ಅಪಘಾತವಾಗುವ ಸಂಭವವಿದೆ. ಆದ್ದರಿಂದ ರಾಜಾಜಿನಗರದ 2ನೇ ಬ್ಲಾಕ್‌ನಿಂದ 1ನೇ ಬ್ಲಾಕ್‌ನ ಎಡ-ಬಲ ರಸ್ತೆಗಳಲ್ಲಿನ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸುವ ಮೂಲಕ ವಾಹನಗಳ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೋರುತ್ತೇನೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.